ರೈತ ಸಂಘದಿಂದ ಧರಣಿ

Update: 2016-08-30 18:49 GMT

 ಮಂಗಳೂರು, ಆ.30: ಅಡಿಕೆ, ತೆಂಗು ಮತ್ತು ರಬ್ಬರ್ ಬೆಳೆ ಗಾರರ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ. ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸಿ ಇತರರು ಹೆಚ್ಚಿನ ಲಾಭ ಪಡೆಯು ತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕಾಗಿದೆ. ಯಾವುದೇ ಪಕ್ಷಗಳು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ರೈತಪರ ಸಂಘಟನೆಗಳು ಒಂದುಗೂಡಬೇಕು ಹಾಗೂ ರಾಜಕೀಯ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಬೇಕು ಎಂದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ ಅಡಿಕೆ ಕ್ವಿಂಟಾಲ್‌ವೊಂದಕ್ಕೆ 35,000 ರೂ., ತೆಂಗಿನಕಾಯಿಗೆ ಟನ್‌ಗೆ ಕನಿಷ್ಠ 25,000 ರೂ. ಹಾಗೂ ರಬ್ಬರ್ ಕ್ವಿಂಟಾಲ್‌ಗ್ಕೆೆ ಕನಿಷ್ಠ 16,000 ರೂ. ಬೆಲೆ ನಿಗದಿ ಮಾಡಬೇಕು. ಹೊಸ ಅಡಿಕೆಗಳನ್ನು ಹಳೆ ಅಡಿಕೆ ಧಾರಣೆಯಲ್ಲಿ ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಳೆಗಳ ಖರೀದಿಗೆ ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ಕನಿಷ್ಠ 2,000 ಕೋ.ರೂ.ಗಳ ಆವರ್ತ ನಿಧಿ ಸ್ಥಾಪಿಸಬೇಕು. ಅಡಿಕೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು. ಪ್ರಾಕೃತಿಕ ವಿಕೋಪದಿಂದ ನಾಶ ಹೊಂದಿದ ಕೃಷಿಗೆ ವೈಜ್ಞಾನಿಕ ಪರಿಹಾರ ದರ ಘೋಷಿಸಬೇಕು. ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಧರಣಿಗೆ ಪೂರ್ವಭಾವಿಯಾಗಿ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ರ್ಯಾಲಿ ನಡೆಯಿತು. ಸಂಘಟನೆಯ ಹಾಸನ ಜಿಲ್ಲಾ ಉಪಾಧ್ಯಕ್ಷ ರುದ್ರೇಶ್ ಗೌಡ, ಜಿಲ್ಲಾ ಪ್ರ. ಕಾರ್ಯದರ್ಶಿ ಸುರೇಶ್ ಭಟ್ ಕೊಜಂಬೆ, ಪ್ರಾಂತೀಯ ರೈತ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಯಾದವ ಶೆಟ್ಟಿ, ಸಂಚಾಲಕ ರೂಪೇಶ್ ರೈ ಅಲಿಮಾರ್, ಸಂಘಟನಾ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಖಜಾಂಚಿ ಮಂಜುನಾಥ ರೈ ಪರಾರಿ, ಕಾರ್ಯದರ್ಶಿಗಳಾದ ರೋನಿ ಮೆಂಡೋನ್ಸಾ, ಇಬ್ರಾಹೀಂ ಖಲೀಲ್ ಪುಚ್ಚೆತಡ್ಕ, ಪ್ರಸಾದ್ ಶೆಟ್ಟಿ, ಸೀತಾರಾಮ ಪದ್ಮುಂಜ ಮತ್ತಿತರರು ಉಪಸ್ಥಿತ ರಿದ್ದರು. ಬಳಿಕ ರೈತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಜಗದೀಶ್ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News