ಚಿಮೇನಿಯಲ್ಲಿ ವಿದ್ಯುತ್ ಸಬ್ ಸ್ಟೇಷನ್: ಸುರೇಂದ್ರನ್

Update: 2016-08-30 18:53 GMT

ಕಾಸರಗೋಡು, ಆ.30: ಜಿಲ್ಲೆಯ ವಿದ್ಯುತ್ ಕೊರತೆ ಪರಿಹರಿಸಲು ಚಿಮೇನಿಯಲ್ಲಿ 440 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಗೆ ಅನುಮತಿ ನೀಡ ಲಾಗಿದೆ ಎಂದು ರಾಜ್ಯ ವಿದ್ಯುತ್ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿ ದರು.
 ಮಂಗಳವಾರ ಕಾಞಂಗಾಡ್‌ನಲ್ಲಿ 33 ಕೆ.ವಿ. ಸಬ್ ಸ್ಟೇಷನ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
440 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣಕ್ಕೆ 2,050 ಕೋ.ರೂ. ವೆಚ್ಚ ತಗಲಲಿದೆ. ಆ ಮೂಲಕ ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆ ಪರಿಹರಿಸಲು ಆದ್ಯತೆ ನೀಡ ಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಇ. ಚಂದ್ರಶೇಖರನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿದ್ಯು ನ್ಮಾನ ಮಂಡಳಿ ನಿರ್ದೇಶಕ ಡಾ.ವಿ. ಶಿವದಾಸನ್, ನಗರಸಭಾ ಅಧ್ಯಕ್ಷ ವಿ.ವಿ.ರಮೇಶ್, ಪಿ.ಕುಮಾರನ್, ರಂಶೀದ್, ಕೆ.ಪಿ.ಜಯರಾಜನ್, ರಾಜಕೀಯ ಮುಖಂಡರಾದ ಕೆ.ಪಿ. ಸತೀಶ್ಚಂದ್ರನ್, ಗೋವಿಂದನ್ ಪಾಲಿಕಾಫಿಲ್, ಎ.ವೇಲಾಯುಧನ್, ಕೆ.ಎಸ್‌ಇಬಿ ಅಧಿಕಾರಿಗಳಾದ ಎನ್.ವೇಣುಗೋಪಾಲ್, ಜಾರ್ಜ್ ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News