ಪ್ರವಾಸೋದ್ಯಮ ವೆಬ್‌ಸೈಟ್ ಅನಾವರಣ

Update: 2016-08-30 18:55 GMT

 ಉಡುಪಿ, ಆ.30: ಉಡುಪಿಯ ಉತ್ಸಾಹಿ ತರುಣರು ಸೇರಿ ರೂಪಿಸಿದ ಪ್ರವಾಸೋದ್ಯಮದ ಕುರಿತ ‘ಹೆವೆನ್ಸ್ ಆಫ್ ಕರ್ನಾಟಕ’ ಅಂತರ್ಜಾಲ ಪ್ರವಾಸಿ ತಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನಾಯರ್‌ಕೆರೆಯಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ಉದ್ಘಾಟಿಸಿದರು. ಈಗ ಲಭ್ಯವಿರುವ ಅಂತರ್ಜಾಲ ತಾಣಗಳಲ್ಲಿ ಉಪಲಬ್ಧವಿರದ ಹಲವಾರು ಪ್ರವಾಸಿ ತಾಣಗಳನ್ನು ನೂತನ ಜಾಲತಾಣ ಹೊಂದಿದೆ. ಈ ಜಾಲತಾಣದಲ್ಲಿ ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಅಲ್ಲಿರುವ ಪ್ರವಾಸಿ ಕೇಂದ್ರಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ ಎಂದು ತಂಡದ ಅವಿನಾಶ್ ಕಾಮತ್ ತಿಳಿಸಿದರು. ಈ ಜಾಲತಾಣವನ್ನು ಅತ್ಯಂತ ಸರಳವಾಗಿ ರೂಪಿಸಲಾಗಿದ್ದು, ಯಾರು ಸಹ ಹೆಚ್ಚಿನ ಪರಿಶ್ರಮವಿಲ್ಲದೆ ಪ್ರವಾಸಿ ಕೇಂದ್ರಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಆರಂಭದಲ್ಲಿ ಈಗ ರಾಜ್ಯದ ಪ್ರಮುಖ ನೂರು ಪ್ರವಾಸಿ ಕೇಂದ್ರಗಳ ಮಾಹಿತಿಯನ್ನು ನೀಡಲಾಗಿದ್ದು, ಮುಂದಿನ ತಿಂಗಳು ಇನ್ನೂ 50 ಕೇಂದ್ರಗಳ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಿದ್ದೇವೆ ಎಂದು ಅವಿನಾಶ್ ಕಾಮತ್ ತಿಳಿಸಿದರು. ಉಡುಪಿಯ ಉತ್ಸಾಹಿ ತರುಣರಾದ ಶಶಿಕಾಂತ್ ಶೆಟ್ಟಿ, ತಿಲಕ್‌ರಾಜ್, ದಿವಾಕರ ಹಿರಿಯಡ್ಕ, ರಶ್ಮಿ ಜೆನ್ನಿಫರ್, ಅಶ್ವಿನಿ ಜೈನ್, ಗುರುರಾಜ್ ಬಿ., ವಿರಾಜ್ ಕಾಪು ಮುಂತಾದವರು ಕೈಜೋಡಿಸಿದ್ದಾರೆ ಎಂದವರು ವಿವರಿಸಿದರು. ಈ ಸಂದರ್ಭ ಶಶಿಕಾಂತ್ ಶೆಟ್ಟಿ, ರಶ್ಮಿ ಜೆನ್ನಿಫರ್, ನಿತೇಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News