ಮದ್ರಸ ಶಿಕ್ಷಕ-ರಕ್ಷಕ ಸಭೆ

Update: 2016-08-30 18:56 GMT

ಮಂಗಳೂರು, ಆ.30: ಮಕ್ಕಳ ಉತ್ತಮ ಭವಿಷ್ಯವು ಪೋಷಕರ ಕೈಯಲ್ಲಿದೆ. ತಂದೆ ತಾಯಿಯ ಮಾದರಿ ಜೀವನ ನಡೆಸಿದರೆ ಮಕ್ಕಳು ಒಳ್ಳೆಯವರಾಗುತ್ತಾರೆ ಎಂದು ಲೊರೆಟ್ಟೊಪದವು ಇರ್ಶಾ ದುಸ್ಸಿಬಿಯಾನ್ ಮದ್ರಸದ ಅಧ್ಯಾಪಕ ಪಿ.ಎಂ. ಹಂಝ ಮುಸ್ಲಿ ಯಾರ್ ಮರ್ದಾಳ ಹೇಳಿದರು. ಲೊರೆಟ್ಟೊಪದವು ಬದ್ರ್ ಜುಮಾ ಮಸೀದಿಯ ಆಡಳಿತ ಸಮಿತಿಯು ಇರ್ಶಾದುಸ್ಸಿಬಿಯಾನ್ ಮದ್ರಸದಲ್ಲಿ ಏರ್ಪಡಿಸಿದ ಶಿಕ್ಷಕ-ರಕ್ಷಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಖತೀಬ್ ಅಬುಲ್ ಬುಶ್ರಾ ಎಂ.ಕೆ. ಅಬ್ದುಲ್ ಉಸ್ತಾದ್ ಟಿ.ಸಿ.ರೋಡ್ ಮೊಂಟೆಪದವು ಸಭೆಯನ್ನು ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು. ಮುಅಲ್ಲಿಂ ಡಿ.ಎ. ಅಬ್ಬಾಸ್ ಮುಸ್ಲಿಯಾರ್ ಪಡಿಕ್ಕಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಂ , ಕೋಶಾಧಿಕಾರಿ ಅಬ್ದುರ್ರಹ್ಮಾನ್, ಅಬೂಬಕರ್ ಸಿದ್ದೀಕ್, ಅಬ್ದುಲ್ ಹಮೀದ್, ಯಹ್‌ಕೂಬ್ ಉಪಸ್ಥಿತರಿದ್ದರು. ಮುಅಲ್ಲಿಂ ಫಝಲುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News