ಮಹಿಳೆಯರು ನೀರುಸಂಗ್ರಹಿಸಲು 20ಕೋಟಿ ಗಂಟೆ ವಿನಿಯೋಗಿಸುತ್ತಿದ್ದಾರೆ: ಯುನಿಸೆಫ್

Update: 2016-08-31 07:19 GMT

ವಿಶ್ವಸಂಸ್ಥೆ,ಆಗಸ್ಟ್ 31: ಜಗತ್ತಿನಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಪ್ರತಿದಿನ 20ಕೋಟಿ ಗಂಟೆಗಳನ್ನು ನೀರು ಸಂಗ್ರಹಣೆಗೆ ಬಳಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ. ಇವರ ಜೀವಮಾನದ ಬಹುದೊಡ್ಡ ಸಮಯ ಹೀಗೆ ವಿನಿಯೋಗಗೊಳ್ಳುತ್ತಿದೆ. ಭಾರತದಲ್ಲಿ ನೀರು ತರುವುದು ಲಕ್ಷಾಂತರ ಹೆಣ್ಣುಮಕ್ಕಳ ದಿನಚರಿಯಾಗಿದೆ ಎಂದು ವಿಶ್ವಸಂಸ್ಥೆಯ ಚಿಲ್ಡ್ರನ್‌ಫಂಡ್ ಹೇಳಿದೆ ಎಂದು ವರದಿಯಾಗಿದೆ.

 ನೀರಿನ ಕ್ಷಾಮದಿಂದಾಗಿ 200ಮಿಲಿಯನ್ ಗಂಟೆಗಳಿಗೂ ಅಧಿಕ, 22,800 ವರ್ಷಕ್ಕೂ ಅಧಿಕ ಸಮಯ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಪ್ರತಿದಿನ ಇದಕ್ಕಾಗಿ ಮೀಸಲಿಡುತ್ತಿದ್ದಾರೆ ಎಂದು ಸೋಮವಾರ ಆರಂಭವಾದ ಜಾಗತಿಕ ನೀರಿನಕುರಿತ ಕಾರ್ಯಕ್ರಮಕ್ಕೆ ಸಂಬಂಧಿಸಿ ಯುನಿಸೆಫ್ ತಿಳಿಸಿದೆ. 2030ಕ್ಕಾಗುವಾಗ ಜಾಗತಿಕ ಮಟ್ಟದಲ್ಲಿ ನೀರು ವತ್ತು ಶೌಚಾಲಯ ಸೌಲಭ್ಯ ಸುಲಭವಾಗಿ ಎಲ್ಲರಿಗೂ ಲಭ್ಯಗೊಳಿಸುವ ಯೋಜನೆಯನ್ನು ವಿಶ್ವಸಂಸ್ಥೆ ಘೋಷಿಸಿದೆ. ಮೂವತ್ತು ನಿಮಿಷಗಳೊಳಗೆ ಪ್ರಾಥಮಿಕ ಸೌಕರ್ಯಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವುದು ವಿಶ್ವಸಂಸ್ಥೆಯ ಉದ್ದೇಶವಾಗಿದೆ.ಈಗ ಆಫ್ರಿಕದ ಶೇ.29 ಮಂದಿ ಕುಡಿಯುವ ನೀರನ್ನು ಸಂಗ್ರಹಿಸಲು ಮೂವತ್ತು ನಿಮಿಷಕ್ಕೂ ಅಧಿಕ ಸಮಯವನ್ನು ವಿನಿಯೋಗಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಲೆಕ್ಕಹಾಕಿದೆ. ಏಷ್ಯದ ನಗರಗಳಲ್ಲಿ ಇದಕ್ಕಾಗಿ 19 ನಿಮಿಷ ಗ್ರಾಮಗಳಲ್ಲಿ 21 ನಿಮಿಷ ವಿನಿಯೋಗಗೊಳ್ಳುತ್ತಿದೆ. 24 ದೇಶಗಳಲ್ಲಿ ಶೇ.3.36 ಮಕ್ಕಳು, ಶೇ.13.54 ಹಿರಿಯ ಮಹಿಳೆಯರು ಮೂವತ್ತು ನಿಮಿಷಕ್ಕೂ ಹೆಚ್ಚು ಸಮಯವನ್ನು ನೀರು ಸಂಗ್ರಹಿಸಲು ಬಳಸುತ್ತಿದ್ದಾರೆಂದು ವಿಶ್ವಸಂಸ್ಥೆ ಲೆಕ್ಕಹಾಕಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News