×
Ad

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ: ಹಿಲರಿಕ್ಲಿಂಟನ್‌ಗೆ 7 ಪಾಯಿಂಟ್ ಮುನ್ನಡೆ

Update: 2016-08-31 16:59 IST

ವಾಷಿಂಗ್ಟನ್,ಆಗಸ್ಟ್ 31: ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್ ಪಾರ್ಟಿಯ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ಟ್ರಂಪ್‌ಗಿಂತ ಏಳು ಪಾಯಿಂಟು ಲೀಡ್ ಲಭಿಸಿದೆ ಎಂದು ಮೋನ್‌ಮೌತ್ ವಿಶ್ವವಿದ್ಯಾನಿಲಯ ನಡೆಸಿದ ಹೊಸ ಸಮೀಕ್ಷೆಯಲ್ಲಿ ಬಹಿರಂಗಗೊಡಿದೆ ಇತರ ಸಮೀಕ್ಷೆಗಳು ಅಮೆರಿಕದ ಮುಖ್ಯರಾಜ್ಯಗಳಾದ ಪೆನಸಲ್ವೇನಿಯ, ಓಹಿಯೊ ಮುಂತಾದೆಡೆ ಭಾರೀ ಹೋರಾಟ ನಡೆಯಲಿದೆ ಎಂದು ಹೇಳಿದ್ದವು. ತ್ರೀ ಎಮರ್ಸನ್ ನಡೆಸಿದ ಸಮೀಕ್ಷೆಯು ಓಹಿಯೊದಲ್ಲಿ ಇಬ್ಬರಿಗೂ ಸಮಾನ 42 ಪಾಯಿಂಟುಗಳನ್ನು ನೀಡಿತ್ತು ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News