ಬ್ರಿಟನ್‌ನಲ್ಲಿ ಜನಾಂಗೀಯ ದಾಳಿ: ಪಿಝಾ ತಿಂದು ಪೊಲೀಶ್ ಭಾಷೆ ಮಾತಾಡಿದ ವ್ಯಕ್ತಿಯನ್ನು ಕೊಂದು ಹಾಕಿದ ಮಕ್ಕಳ ತಂಡ
ಲಂಡನ್,ಆಗಸ್ಟ್ 31: ಎಸೆಕ್ಸ್‌ನ ಹಾರ್ಲೆ ಎಂಬಲ್ಲಿ ಪೊಲೀಶ್ ಭಾಷೆಯಲ್ಲಿ ಗೆಳೆಯನೊಂದಿಗೆ ಮಾತಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಹದಿಹರೆಯದ ಮಕ್ಕಳ ತಂಡ ಥಳಿಸಿದ್ದು, ಇವರಲ್ಲಿ ಒಬ್ಬ ನಂತರ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆಂದು ವರದಿಯಾಗಿದೆ. ಪೊಲೀಶ್ ಮಾತಾಡಿದ್ದು ಈ ಗೂಂಡಾ ಮಕ್ಕಳ ತಂಡಕ್ಕೆ ಇಷ್ಟವಾಗಿರಲಿಲ್ಲ. ಮೊದಲು ಪೊಲೀಶ್ ಭಾಷೆ ಮಾತಾಡಿದ್ದಕ್ಕೆ ಜಗಳ ತೆಗೆದು ನಂತರ ಇವರೆಲ್ಲ ಸೇರಿ ಮಾರಣಾಂತಿಕ ಹೊಡೆದಿದ್ದರು. ಈ ತಂಡದಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳುಸೇರಿ ಇಪ್ಪತ್ತು ಮಂದಿಯಿದ್ದರು ಎನ್ನಲಾಗಿದೆ.
ಪೋಲೆಂಡ್‌ನ ಅರ್ಕದಿಯೂಸ್ ಜೋಸ್ ವಿಕ್ ಎಂಬ ನಲ್ವತ್ತುವರ್ಷವಯಸ್ಸಿನ ವ್ಯಕ್ತಿ ಈ ಮಕ್ಕಳ ಹಲ್ಲೆಯಿಂದಾಗಿ ಕ್ರೂರವಾಗಿ ಹತ್ಯೆಯಾಗಿದ್ದಾನೆ. ಈತ ತನ್ನ ಗೆಳೆಯನೊಂದಿಗೆ ಪಿಝಾ ತಿನ್ನುತ್ತಾ ಪೊಲೀಶ್‌ಭಾಷೆಯಲ್ಲಿ ಮಾತಾಡುತ್ತಿದ್ದ. ಇವರನ್ನು ಮಕ್ಕಳ ತಂಡ ಮುತ್ತಿಗೆ ಹಾಕಿ ಮಾರಣಾಂತಿಕವಾಗಿ ಥಳಿಸಿದೆ. ಘಟನೆಯಲ್ಲಿ ಅರ್ಕದಿಯೂಸ್ ಮೃತನಾಗಿದ್ದು, ಈತನ ಗೆಳೆಯ ಅಪಾಯದಿಂದ ಪಾರಾಗಿದ್ದಾನೆ.
ಹಾರ್ಲೆಯ ಒಂದು ಟೇಕ್ ಎವೆಯ ಹೊರಗೆ ಕಳೆದ ಶನಿವಾರ ಘಟನೆ ನಡೆದಿದ್ದು. ಎಸೆಕ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಹದಿನೈದು ಮತ್ತು ಹದಿನಾರು ವಯಸ್ಸಿನ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಜನಾಂಗೀಯ ದ್ವೇಷವೇ ಅರ್ಕದಿಯೂಸ್ ಜೋಸ್ ವಿಕ್‌ನ ಕೊಲೆಗೆ ಕಾರಣವೆಂದು ಶಂಕಿಸಲಾಗಿದ್ದು. ಬದುಕುಳಿದಿರುವ ಇನ್ನೊಬ್ಬ ಪೋಲೆಂಡ್ ವ್ಯಕ್ತಿಯ ಹೊಟ್ಟೆಗೆ ಕೈಗಳಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.