ಬ್ರೆಝಿಲ್ ಅಧ್ಯಕ್ಷೆ ದಿಲ್ಮಾ ರೊಸೆಫ್ ರನ್ನು ಪದಚ್ಯುತಗೊಳಿಸಿದ ಸೆನೆಟ್

Update: 2016-08-31 18:11 GMT

ರಿಯೊ ಡಿ ಜನೈರೊ,ಆ.31: ಮಹಾಭಿಯೋಗ ವಿಚಾರಣೆಯಲ್ಲಿ ಅಧ್ಯಕ್ಷೆ ದಿಲ್ಮಾ ರೌಸೆಫ್ ಅವರ ಪದಚ್ಯುತಿಯ ಪರವಾಗಿ ಬ್ರೆಝಿಲ್ ಸೆನೆಟ್ ಮತ ಚಲಾಯಿಸಿದ್ದು, ಇದರೊಂದಿಗೆ ದೇಶದಲ್ಲಿ 13 ವರ್ಷಗಳ ಎಡರಂಗ ಆಡಳಿತ ಅಂತ್ಯಗೊಳ್ಳಲು ವೇದಿಕೆಯು ಸಜ್ಜಾಗಿದೆ.

ಐದು ದಿನಗಳ ವಿಚಾರಣೆ ಮತ್ತು ರಾತ್ರಿಯಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ ಬುಧವಾರ 81 ಸೆನೆಟರ್‌ಗಳ ಪೈಕಿ 61 ಜನರು ರೌಸೆಫ್ ವಿರುದ್ಧ ಮತ ಚಲಾಯಿಸಿದರು.

ರೌಸೆಫ್ ಮುಂದಿನ ಎಂಟು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆಯನ್ನು ನಿರ್ವಹಿಸದಂತೆ ನಿಷೇಧಿಸಲ್ಪಡಲಿದ್ದಾರೆಯೇ ಎನ್ನುವುದನ್ನು ಶೀಘ್ರವೇ ನಡೆಯಲಿರುವ ಇನ್ನೊಂದು ಮತದಾನವು ನಿರ್ಧರಿಸಲಿದೆ.

ರೌಸೆಫ್ ವಿರುದ್ಧದ ಆರೋಪಗಳು ರಾಜಕೀಯ ಸ್ವರೂಪದ್ದಾಗಿದ್ದು, ಕ್ರಿಮಿನಲ್ ಅಂಶಗಳನ್ನು ಹೊಂದಿಲ್ಲ, ಹೀಗಾಗಿ ಅವರ ಪದಚ್ಯುತಿಯೊಡನೆ ಪ್ರಕರಣ ಮುಕ್ತಾಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News