ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ

Update: 2016-08-31 17:33 GMT

ಹೊಸದಿಲ್ಲಿ, ಆ.31: ಬಲೂಚಿಸ್ತಾನ್ ವಿಷಯದಲ್ಲಿ ಪಾಕಿಸ್ತಾನವನ್ನು ಧೈರ್ಯಗುಂದಿಸುವ ಇನ್ನೊಂದು ಪ್ರಯತ್ನವಾಗಿ ಆಲ್ ಇಂಡಿಯಾ ರೇಡಿಯೊ(ಆಕಾಶವಾಣಿ) ಶೀಘ್ರವೇ ಬಲೂಚಿ ಭಾಷೆಯಲ್ಲಿ ತನ್ನ ಕಾರ್ಯಕ್ರಮಗಳನ್ನು ಆರಂಭಿಸುವ ನಿರೀಕ್ಷೆಯಿದೆ.

ಇದಕ್ಕೆ ನರೇಂದ್ರ ಮೋದಿ ಸರಕಾರದ ಅನುಮತಿ ಲಭಿಸಿದೆ ಎಂದು ಆಕಾಶವಾಣಿ ಮೂಲಗಳು ತಿಳಿಸಿವೆ.
  ಪ್ರಧಾನಿ ಮೋದಿಯವರು ತನ್ನ ಸ್ವಾತಂತ್ರದಿನದ ಭಾಷಣದಲ್ಲಿ ಬಲೂಚಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಿಗೆ ‘ಸ್ವಾತಂತ್ರ’ವನ್ನು ಬಹಿರಂಗವಾಗಿ ಬೆಂಬಲಿಸಿದಾಗಿನಿಂದ ಪಾಕ್ ಸರಕಾರವು ಸ್ಥಳೀಯರ ಧ್ವನಿಯನ್ನಡಗಿಸಲು ಅವರ ಮೇಲೆ ಇನ್ನಷ್ಟು ಕ್ರೂರ ದೌರ್ಜನ್ಯಗಳನ್ನೆಸಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News