ನಿಟ್ಟೆ ವಿವಿಯಲ್ಲಿ ತುಳು ಅಧ್ಯಯನ ಕೇಂದ್ರ

Update: 2016-08-31 18:43 GMT

ಕೊಣಾಜೆ, ಆ.31: ನಿಟ್ಟೆ ವಿಶ್ವವಿದ್ಯಾನಿಲಯವು ‘ನಿಟ್ಟೆ ಯುನಿ ವರ್ಸಿಟಿ ಸೆಂಟರ್ ಫಾರ್ ತುಳು ಸ್ಟಡೀಸ್’ ಎಂಬ ಹೆಸರಿನಲ್ಲಿ ತುಳು ಅಧ್ಯಯನ ಕೇಂದ್ರವೊಂದನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸುವ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಮೊದಲ ಹೆಜ್ಜೆಯಾಗಿ ತುಳು ಜ್ಞಾತಿ ಪದಕೋಶ ಯೋಜನೆಯನ್ನು ವಿವಿ ಮುನ್ನಡೆಸುತ್ತಿದೆ. ತುಳು ಅಧ್ಯಯನ ಕೇಂದ್ರವನ್ನು ಪರಿಚಯಿಸುವುದರೊಂದಿಗೆ ತುಳುವೇತರರಿಗೆ ತುಳು ತರಗತಿಗಳನ್ನು, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುವುದು ಹಾಗೂ ಗ್ರಂಥಾಲಯ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಭಾವಚಿತ್ರಗಳ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ ಎಂದು ನಿಟ್ಟೆ ವಿವಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News