ರಾ.ಹೆದ್ದಾರಿ 169ರ ಅಭಿವೃದ್ಧಿಗೆ 146 ಕೋ.ರೂ. ಮಂಜೂರು

Update: 2016-08-31 18:44 GMT

ಉಡುಪಿ, ಆ.31: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುವ ಸೋಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರ ವಿವಿಧ ಭಾಗಗಳಲ್ಲಿ ರಸ್ತೆ ವಿಸ್ತರಣೆ, ದ್ವಿಪಥೀಕರಣ, ಅಡ್ಡ ಮೋರಿಗಳ ರಚನೆ, ಕಿರು ಸೇತುವೆ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ 146.16 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಅನುದಾನ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರ ಹೀಗಿದೆ. ರಾ.ಹೆ.169ರ ಹರಿಹರಪುರ- ಶೃಂಗೇರಿ ನಡುವಿನ ಭಾಗದಲ್ಲಿ ನಾಲ್ಕು ಕಿರುಸೇತುವೆಗಳ ನಿರ್ಮಾಣಕ್ಕೆ 21.06 ಕೋ.ರೂ., ಮಾಳ ಘಾಟ್‌ನಿಂದ ಬಜಗೋಳಿವರೆಗೆ ರಸ್ತೆ ದ್ವಿಪಥಗೊಳಿಸಿ ವಿಸ್ತರಣೆಗೆ 29.45 ಕೋ.ರೂ., ತೀರ್ಥಹಳ್ಳಿ ಯಿಂದ ಕೊಪ್ಪ ಮಧ್ಯೆ ಅಡ್ಡಮೋರಿಗಳು ಮತ್ತು ಕಿರು ಸೇತುವೆಗಳ ನಿರ್ಮಾಣ ಕಾಮಗಾರಿಗೆ 23.80 ಕೋ.ರೂ., ಹರಿಹರಪುರ ಮತ್ತು ಶೃಂಗೇರಿ ಮಧ್ಯೆ ಅಡ್ಡಮೋರಿ ರಚನೆ ಮತ್ತು ಕಿರುಸೇತುವೆಗಳ ನಿರ್ಮಾಣಕ್ಕೆ 9.72 ಕೋ.ರೂ., ಬಜಗೋಳಿಯಿಂದ ಬೆಳುವಾಯಿವರೆಗೆ ರಸ್ತೆ ದ್ವಿಪಥಗೊಳಿಸಿ ವಿಸ್ತರಣೆ ಕಾಮಗಾರಿಗೆ 39.20 ಕೋ.ರೂ., ಕೊಪ್ಪ-ಹರಿಹರಪುರ ಮಧ್ಯೆ ಅಡ್ಡಮೋರಿಗಳ ರಚನೆ ಮತ್ತು ಕಿರುಸೇತುವೆಗಳ ನಿರ್ಮಾಣಕ್ಕೆ 22.93 ಕೋ.ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News