ವಿದ್ಯುತ್ ತಂತಿ ಸ್ಪರ್ಶ: ರೈತ ಮೃತ್ಯು; ಎರಡು ಹಸುಗಳು ಸಾವು

Update: 2016-08-31 18:47 GMT

ಕಾಸರಗೋಡು, ಆ.31: ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ರೈತ ಹಾಗೂ ಎರಡು ಹಸುಗಳು ಮೃತಪಟ್ಟ ದಾರುಣ ಘಟನೆ ಬೇಕಲ ಬಳಿಯ ಪಳ್ಳಿಕೆರೆಯಲ್ಲಿ ಬುಧವಾರ ನಡೆದಿದೆ. ಹೈನುಗಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಸಿ.ನಾರಾಯಣನ್ ನಾಯರ್(55) ಮೃತಪಟ್ಟ ರಾಗಿದ್ದಾರೆ. ಇಂದು ಬೆಳಗ್ಗೆ ನಾರಾಯಣನ್ ಸೊಸೈಟಿಗೆ ಹಾಲು ಕೊಂಡೊಯ್ದು ಬಳಿಕ ಮೂರು ಹಸುಗಳನ್ನು ಮನೆ ಸಮೀಪದ ಬಯಲಿಗೆ ಮೇಯಿಸಲು ಕರೆದೊ ಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
   ತೋಟದ ಮೂಲಕ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಅಡಿಕೆಮರ ಮುರಿದುಬಿದ್ದಿದೆ. ಇದ ರಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿರಲಿಲ್ಲ. ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ನಾರಾಯಣನ್ ಅದನ್ನು ತುಳಿದಿದ್ದಾರೆ. ಇದರಿಂದ ಗಂಭೀರ ಆಘಾತಕ್ಕೊಳಗಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗಿದ್ದ ಮೂರು ಹಸುಗಳ ಪೈಕಿ ಎರಡು ವಿದ್ಯುತ್ ಆಘಾತಕ್ಕೊಳಗಾಗಿ ಅಲ್ಲೇ ಅಸುನೀಗಿವೆ.
ಬೊಬ್ಬೆ ಕೇಳಿ ನಾರಾಯಣನ್‌ರ ಪತ್ನಿ ಸುಲೋಚನಾ ಧಾವಿಸಿ ಬಂದು ನೋಡಿದಾಗ ದಾರುಣ ಘಟನೆ ನಡೆದಿರುವುದು ಕಂಡುಬಂತು. ಬಳಿಕ ಸ್ಥಳೀಯರು ವಿದ್ಯುತ್ ಸಂಪರ್ಕ ಮೊಟಕುಗೊಳಿಸಿ ನಾರಾಯಣನ್‌ರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಈ ಪರಿಸರವು ಪೊದೆಗಳಿಂದ ಆವೃತ್ತಗೊಂಡಿರುವುದರಿಂದ ವಿದ್ಯುತ್ ತಂತಿ ಕಡಿದು ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ. ನಾರಾಯಣನ್‌ರೊಂದಿಗೆ ಅರ್ಧದಾರಿ ತನಕ ಹೋಗಿದ್ದ ಸುಲೋಚನಾ ಅಲ್ಲಿಂದ ಮನೆಗೆ ಮರಳಿದ್ದರು. ಉತ್ತಮ ಕೃಷಿಕರಾಗಿದ್ದ ನಾರಾಯಣನ್ ನಾಯರ್ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ದುರಂತದ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News