ಸಮಾಜದ ಹಿತದೃಷ್ಟಿಯಿಂದ ಭದ್ರತಾ ಬಾಂಡ್: ಎಸ್ಪಿ ಸ್ಪಷ್ಟನೆ

Update: 2016-08-31 18:53 GMT


ಉಪ್ಪಿನಂಗಡಿ, ಆ.31: ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ನಡೆಯುವ ಗಣೇಶೋತ್ಸವ ದಂತಹ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡಲು ಬಾಂಡ್ ವಿಧಿಸಲಾಗುತ್ತಿದೆಯೇ ಹೊರತು ಇದರಲ್ಲಿ ಪೊಲೀಸ್ ಇಲಾಖೆಯ ಯಾವುದೇ ಸ್ವಾರ್ಥ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಭೂಷಣ್‌ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.

ಗಣೇಶೋತ್ಸವ ಹಾಗೂ ಬಕ್ರೀದ್ ಆಚರಣೆಯ ಹಿನ್ನೆಲೆಯಲ್ಲಿ ಬುಧವಾರ ಉಪ್ಪಿನಂಗಡಿಯ ಸಂಗಮಕೃಪಾ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಾರ್ವಜನಿಕವಾಗಿ ನಡೆಯುವ ಧಾರ್ಮಿಕ ಆಚರಣೆ ಗಳಿಗೆ ಅನುಮತಿ ನೀಡಲು ಎಲ್ಲ ಕಡೆಗಳಿಗೂ ಭದ್ರತೆಯ ಬಾಂಡ್‌ನ ಅಗತ್ಯವಿಲ್ಲ. ಎಲ್ಲಿ ಈ ಹಿಂದೆ ಗಲಭೆಯಂತಹ ಅಹಿತಕರ ಘಟನೆಗಳು ನಡೆದಿವೆಯೋ ಮತ್ತು ಅಂತಹ ಘಟನೆ ನಡೆಯುವ ಸಾಧ್ಯತೆ ಎಲ್ಲಿ ಇದೆಯೋ ಆ ಸ್ಥಳಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಿಗೆ ಮಾತ್ರ ಪೊಲೀಸ್ ಇಲಾಖೆ ಬಾಂಡ್‌ನ ಭದ್ರತೆ ನೀಡಲು ಸೂಚಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
 ಉಪ್ಪಿನಂಗಡಿಯ ಶ್ರೀರಾಮ ಹಿ.ಪ್ರಾ. ಶಾಲೆಯ ಸಂಚಾಲಕ ಯು.ಜಿ.ರಾಧಾ, ಪುತ್ತೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಸ್ಯ ಕೇಶವ ಗೌಡ ಬಜತ್ತೂರು, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ನಝೀರ್ ಮಠ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಆರೆಸ್ಸೆಸ್ ಪ್ರಮುಖ ರವಿ ಇಳಂತಿಲ ಮೊದಲಾದವರು ಮಾತನಾಡಿದರು.
 ಪುತ್ತೂರು ಎಎಸ್ಪಿರಿಷ್ಯಂತ್, ನಗರ ವೃತ್ತನಿರೀಕ್ಷಕ ಮಹೇಶ್ ಪ್ರಸಾದ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಉಪ್ಪಿನಂಗಡಿ ಎಸ್ಸೈ ತಿಮ್ಮಪ್ಪನಾಯ್ಕ ಹಾಗೂ ತಾಪಂ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಉಪ್ಪಿನಂಗಡಿ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತಾ, ಮುಹಮ್ಮದ್ ಕೆಂಪಿ, ಜಗದೀಶ್ ಶೆಟ್ಟಿ, ಯು.ಟಿ. ತೌಸಿಫ್, ಚಂದ್ರಶೇಖರ್ ಮಡಿವಾಳ, ಪ್ರಶಾಂತ್ ಪೈ, ಸುನೀಲ್, ನೂರುದ್ದೀನ್ ಸಾಲ್ಮರ, ಯುನಿಕ್ ರಹ್ಮಾನ್, ಕೈಲಾರ್ ರಾಜ್‌ಗೋಪಾಲ್ ಭಟ್, ಕರುಣಾಕರ ಸುವರ್ಣ, ಅನಿಲ್ ಕುಮಾರ್ ಉಪ್ಪಿನಂಗಡಿ, ಶ್ರೀಕಾಂತ್ ಶೆಟ್ಟಿ, ರಕ್ಷಿತ್ ಕೊಯ್ಲ, ರವಿ ಬಲ್ಯ, ಶ್ಯಾಮ್ ಸುದರ್ಶನ್, ನಾರಾಯಣ ಭಟ್ ಕುಪ್ಪೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News