ಹಗಲಲ್ಲಿ ಧರ್ಮ ಗುರು, ರಾತ್ರಿ ಕಳ್ಳ!

Update: 2016-09-01 03:17 GMT

ಪುಣೆ, ಸೆ.1: ಹಗಲಲ್ಲಿ ಧರ್ಮ ಗುರು, ರಾತ್ರಿ ಕಳ್ಳ! ಇದು ಯಾವುದೋ ಬಾಲಿವುಡ್ ಚಿತ್ರದ ದೃಶ್ಯವಲ್ಲ; ಅಜಯ್ ಮಧುಕರ್ ಗಾಯಕವಾಡ್ ಎಂಬಾತನ ನಿಜ ಕಥೆ.

ನಗರದ ವಿವಿಧೆಡೆಗಳಲ್ಲಿ 25ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಈತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಬುದ್ಧವಿಹಾರದಲ್ಲಿ ಕೇರ್‌ಟೇಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾಯಕವಾಡ್, ನೆಮ್ಮದಿಯ ಜೀವನ ಸಾಗಿಸುತ್ತಿದ್ದ. ಆದರೆ ಸಹವಾಸ ದೋಷದಿಂದ ಈ ಕಾಳದಂಧೆಗೆ ಇಳಿದ.

ಬುದ್ಧವಿಹಾರದಲ್ಲಿ ಕೇರ್‌ಟೇಕರ್ ಆಗಿದ್ದ ಈತ, ಪ್ರಧಾನ ಪುರೋಹಿತರು ಇಲ್ಲದಿದ್ದಾಗ ಹಲವು ವಿವಾಹಗಳನ್ನು ಕೂಡಾ ಮಾಡಿಸುತ್ತಿದ್ದ. ಹಲವು ಜೋಡಿಗೆ ವಿವಾಹ ಮಧ್ಯಸ್ಥಿಕೆದಾರನಾಗಿಯೂ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬುದ್ಧವಿಹಾರದಲ್ಲಿ ಕೆಲಸ ಮಾಡುತ್ತಿದ್ದಾಗ, ಇಶ್ಪಾಕ್ ಮುಹಮ್ಮದ್ ಇಕ್ಬಾಲ್ ಶೇಖ್ (47) ಹಾಗೂ ವೀರನ್‌ಸ್ವಾಮಿ (24) ಎಂಬವರ ಸ್ನೇಹ ಬೆಳೆಯಿತು. ಇಬ್ಬರ ವಿರುದ್ಧವೂ ಮುಂಬೈ ಹಾಗೂ ಥಾಣೆಯಲ್ಲಿ ಹಲವು ಪ್ರಕರಣಗಳಿದ್ದವು. ಇವರ ಸಹವಾಸದಿಂದ ಈತ ಕೂಡಾ ಕಳ್ಳದಂಧೆಗೆ ಇಳಿದ ಎಂದು ಪಿಎಸ್ಸೈ ಸುಷ್ಮಾ ಚವ್ಹಾಣ್ ವಿವರಿಸಿದ್ದಾರೆ.

ಈ ದಂಧೆಗೆ ಇಳಿದ ಬಳಿಕ ಹಗಲಿನಲ್ಲಿ ಧಾರ್ಮಿಕ ಕಾರ್ಯ ಮಾಡುತ್ತಿದ್ದ ಗಾಯಕ್‌ವಾಡ್ (43) ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News