×
Ad

ಕಂದಮಾಲ್: ನ್ಯಾಯಕ್ಕಾಗಿ ಸುದೀರ್ಘ ಕಾಯುವಿಕೆ

Update: 2016-09-01 23:11 IST

ಇಂದು ನಾವು 2008ರಲ್ಲಿ ಕಂದಮಾಲ್‌ನಲ್ಲಿ ನಡೆದಂತಹ ಭಯಾನಕ ಹಿಂಸಾಚಾರವನ್ನು ನೋವಿನಿಂದ ನೆನಪಿಸಿಕೊಳ್ಳುವಾಗ ಕೋಮು ಹಿಂಸಾಚಾರ, ಅಲ್ಪಸಂಖ್ಯಾತರ ಪರಿಸ್ಥಿತಿ, ನ್ಯಾಯ ವಿತರಣಾ ವ್ಯವಸ್ಥೆಯ ಸ್ಥಿತಿಗೆ ಸಂಬಂಧಪಟ್ಟ ವಿಷಯಗಳು ನಮ್ಮ ತಲೆಯಲ್ಲಿ ಮೂಡುತ್ತವೆ.

ಆ ಘಟನೆ

2008ರಲ್ಲಿ ಒಡಿಶಾದಲ್ಲಿ ಅಲ್ಪಸಂಖ್ಯಾತ ಕ್ರೆಸ್ತರ ವಿರುದ್ಧ ಹಿಂದೆಂದೂ ಕಾಣದ ಹಿಂಸಾಚಾರಗಳು ನಡೆದವು. 2008ರ ಆಗಸ್ಟ್ 23ರಂದು ಬಹುಶಃ ಮಾವೋವಾದಿಗಳು ಸ್ವಾಮಿ ಲಕ್ಷ್ಮ್ಮಣಾನಂದ ಮತ್ತವರ ನಾಲ್ಕು ಅನುಯಾಯಿಗಳನ್ನು ಹತ್ಯೆ ಮಾಡಿದರು. ತಕ್ಷಣ ಒಂದು ದೊಡ್ಡ ಮಟ್ಟದಲ್ಲಿ ಕ್ರೆಸ್ತ ವಿರೋ ಹಿಂಸಾಚಾರ ಭುಗಿಲೆದ್ದಿತು. ಅದು ಆರಂಭವಾದ ರೀತಿಯನ್ನು ಕಂಡಾಗ ಅದಕ್ಕೆ ಎಲ್ಲಾ ಪೂರ್ವತಯಾರಿ ನಡೆದಿರುವಂತೆ ಕಂಡುಬಂದಿತ್ತು. ಅದು ಅತ್ಯಂತ ವ್ಯವಸ್ಥಿತ ಮತ್ತು ವಿಸ್ತಾರವಾಗಿ ಹರಡಿತು. ಒಂದು ರೀತಿಯಲ್ಲಿ ಎಲ್ಲಾ ತಯಾರಿಗಳನ್ನು ನಡೆಸಿ ಕೇವಲ ಒಂದು ನೆಪಕ್ಕಾಗಿ ಮಾತ್ರ ಕಾಯುವಂತೆ ಭಾಸವಾಗಿತ್ತು.

ಭಾರತದಲ್ಲಿ ಕ್ರೆಸ್ತರು

ಭಾರತದಲ್ಲಿ ಕ್ರೆಸ್ತರು ಸಣ್ಣಪ್ರಮಾಣದಲ್ಲಿರುವ ಅಲ್ಪಸಂಖ್ಯಾತರು. ಬ್ರಿಟಿಷರು ಭಾರತಕ್ಕೆ ಕ್ರೆಸ್ತಧರ್ಮವನ್ನು ತಂದರು ಎಂಬ ವಾದಕ್ಕೆ ವಿರುದ್ಧವಾಗಿ ವಾಸ್ತವದಲ್ಲಿ ಅದು ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು. ಅದರ ಪ್ರಸಾರ ಮಾತ್ರ ನಿಧಾನವಾಗಿ ಆಗಿದೆ. 1990ರ ದಶಕದಲ್ಲಿ ಕ್ರೆಸ್ತ ಮಿಶನರಿಗಳು ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುವ ತನಕವೂ ಈ ಅಲ್ಪಸಂಖ್ಯಾತ ಧರ್ಮದ ಬಗ್ಗೆ ಅಷ್ಟೊಂದಾಗಿ ಯಾರಿಗೂ ತಿಳಿದಿರಲಿಲ್ಲ. ಕ್ರೆಸ್ತವಿರೋ ಹಿಂಸಾಚಾರಗಳು ದೇಶದ ಅತ್ಯಂತ ಆಂತರಿಕ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದು ಅದರ ಜೊತೆಗೆ ವಿಶ್ವಹಿಂದೂ ಪರಿಷತ್-ವನವಾಸಿ ಕಲ್ಯಾಣ ಆಶ್ರಮ ನಡೆಸುವ ಆದಿವಾಸಿಗಳನ್ನು ಹಿಂದುತ್ವದ ತೆಕ್ಕೆಗೆ ಮತಾಂತರಗೊಳಿಸುವ ಪ್ರಕ್ರಿಯೆಯೂ ನಡೆಯುತ್ತದೆ. 1996ರಲ್ಲಿ ಮತಾಂತರ-ಕ್ರೆಸ್ತವಿರೋ ಹಿಂಸಾಚಾರ ನಮ್ಮೆಲ್ಲರ ಗಮನವನ್ನು ಸೆಳೆಯಿತು. ಏಕಾಏಕಿ ಎಲ್ಲಿಂದಲೋ ಮೋಸ ಅಥವಾ ಒತ್ತಾಯದಿಂದ ಕ್ರೆಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುವ ಬೆದರಿಕೆ ಸೃಷ್ಟಿಯಾಯಿತು. ಅದೇ ಸಮಯಕ್ಕೆ ತೀರಾ ಒಳಪ್ರದೇಶಗಳಲ್ಲಿ ಪಾದ್ರಿಗಳು ಮತ್ತು ನನ್‌ಗಳ ಮೇಲೆ ನಡೆಯುವ ಹಲ್ಲೆಗಳೂ ಹೆಚ್ಚಾಗತೊಡಗಿತು. ಒಂದು ಕುಚೋದ್ಯವೆಂದರೆ ಒಂದೆಡೆ ಗ್ರಾಮೀಣ ಒಳಭಾಗಗಳಲ್ಲಿ ಪಾದ್ರಿಗಳು, ನನ್‌ಗಳ ಮೇಲೆ ಹಲ್ಲೆಗಳು ನಡೆಯುತ್ತಿದ್ದರೆ ಇನ್ನೊಂದೆಡೆ ನಗರಗಳಲ್ಲಿರುವ ಕ್ರೆಸ್ತ ಸಂಸ್ಥೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸೇವೆಗಳಲ್ಲಿ ಬೇಡಿಕೆಗೆ ತಕ್ಕಂತೆ ನಿಭಾಯಿಸುವ ಒತ್ತಡ ಕ್ರೆಸ್ತ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೇಲೆ ಹೇರಲಾಯಿತು. ದೂರದ ಪ್ರದೇಶಗಳಲ್ಲಿ ಕ್ರೆಸ್ತ ಮಿಶನರಿಗಳನ್ನು ಆಯ್ದು ಗುರಿಯಾಗಿಸುವುದು ಒಂದು ಗಂಭೀರವಾಗಿ ಗಮನಹರಿಸಬೇಕಾದ, ಕಾಳಜಿಯ ಮತ್ತು ಆತ್ಮಾವಲೋಕನ ಮಾಡಬೇಕಾದ ವಿಷಯ.

ಸಾಮಾಜಿಕ ಸಾಮಾನ್ಯಪ್ರಜ್ಞೆ
ಸಾಮಾಜಿಕ ಸಾಮಾನ್ಯಪಜ್ಞೆಯು ‘‘ಅವರು ಮತಾಂತರ ನಡೆಸುತ್ತಿದ್ದಾರೆ’’ ಎಂಬುದನ್ನು ಒಪ್ಪುತ್ತಿದ್ದಂತೆ ಸಮಾಜದ ಮತ್ತು ಅಕಾರಿಗಳ ಮೌನಸಮ್ಮತಿ ಕೂಡಾ ಮಿಶನರಿಗಳ ಈ ದಾಳಿಗೆ ಕಾರಣವಾಗಿತ್ತು. ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ಎಲ್ಲರೂ ಕೇಳಿದ್ದರು. ಅದು ಹೇಗೆ ಇನ್ನೊಂದು ಹೊಸ ಅಲ್ಪಸಂಖ್ಯಾತರು ‘‘ಸಮಸ್ಯೆಯ ಮೂಲವಾಗುತ್ತಾರೆ’’ ಮತ್ತು ಅದಕ್ಕಾಗಿ ಗುರಿಪಡಿಸಲಾಗುತ್ತಾರೆ?
ಕರ್ರಸ್ತವಿರೋ ಹಿಂಸಾಚಾರಗಳು ಲಾತೂರ್‌ನಲ್ಲಿ 1996ರಲ್ಲಿ ಕ್ಯಾಥೊಲಿಕ್ ಆರೋಗ್ಯ ಕೇಂದ್ರದ ಮೇಲೆ ನಡೆದ ದಾಳಿ, ಬೈಬಲ್‌ಗೆ ಬೆಂಕಿ ಹಚ್ಚಿದ್ದ ಮತ್ತು ಕ್ರೆಸ್ತ ಗುಂಪಿನ ಮೇಲೆ ದಾಳಿ ಮುಂತಾದ ಪ್ರತ್ಯೇಕ ಘಟನೆಗಳೊಂದಿಗೆ ಆರಂಭವಾಯಿತು.

ಆದರೆ ಅತ್ಯಂತ ಆಘಾತಕಾರಿ ಘಟನೆ ನಡೆದಿದ್ದು 1999ರ ಜನವರಿಯಲ್ಲಿ. ಅಂದು ಪಾದ್ರಿ ಗ್ರಹಂ ಸ್ಟುವರ್ಡ್ ಸ್ಟೆನ್ಸ್ ಮತ್ತಾತನ ಇಬ್ಬರು ಮಕ್ಕಳಾದ 9ರ ಹರೆಯದ ಫಿಲಿಪ್ ಮತ್ತು 7ರ ಹರೆಯದ ಟಿಮೊತಿಯನ್ನು ಅವರು ಹಳ್ಳಿಯಲ್ಲಿ ಹಬ್ಬದಲ್ಲಿ ಭಾಗವಹಿಸಿ ತಮ್ಮ ಜೀಪ್‌ನಲ್ಲಿ ಮಲಗಿದ್ದ ವೇಳೆಯಲ್ಲಿ ಬೆಂಕಿ ಹಚ್ಚಿ ಸಜೀವ ಸುಡಲಾಗಿತ್ತು. ನಿಧಾನವಾಗಿ ಈ ದಾಳಿಗಳ ರೂಪುರೇಷೆ ಹೊರಬರಲಾರಂಭಿಸಿತು. ಆರೆಸ್ಸೆಸ್ ಅಂಗಸಂಸ್ಥೆ ವನವಾಸಿ ಕಲ್ಯಾಣ ಆಶ್ರಮ ಸಕ್ರಿಯವಾಗಿದ್ದು ಏಕಲ್ ಶಾಲೆಗಳ ಜೊತೆಗೆ ತಮ್ಮ ಸಿದ್ಧಾಂತವನ್ನು ಹರಡುವ ಮತ್ತು ಆದಿವಾಸಿಗಳನ್ನು ಹಿಂದೂಗಳನ್ನಾಗಿಸುವ ಕಡೆಗಳಲ್ಲಿ ಇಂಥಾ ಹಿಂಸಾಚಾರದ ಘಟನೆಗಳು ಹೆಚ್ಚಾಗಿ ಮತ್ತು ತೀವ್ರವಾಗಿ ನಡೆಯುತ್ತವೆ.

ಕ್ರೈಸ್ತವಿರೋ ಹಿಂಸಾಚಾರ: ಲಕ್ಷಣಗಳು
ಕ್ರೈಸ್ತ ಮಿಶನರಿಗಳ ಮೇಲಿನ ದಾಳಿ ಈಗಂತೂ ಒಂದು ಸಾಮಾನ್ಯ ಸಂಗತಿಯಾಗಿದೆ. ಮುಸ್ಲಿಂ ವಿರೋ ಹಿಂಸಾಚಾರದಂತೆ ಬೃಹತ್‌ಮಟ್ಟದಲ್ಲಿ ಇಲ್ಲದೆ ಅದು ಎಲ್ಲಾ ಕಡೆಯು ಹರಡಿದೆ ಮತ್ತು ಅತ್ಯಂತ ಕಡಿಮೆ ಮಟ್ಟದಲ್ಲಿ ನಡೆಯುತ್ತದೆ. ಪಾದ್ರಿ ಸ್ಟೆನ್ಸ್‌ರನ್ನು ಜೀವಂತ ದಹಿಸಿದ್ದು ಮತ್ತು ರಾಣಿ ಮರಿಯಾರನ್ನು ಹತ್ಯೆ ಮಾಡಿದಂಥಾ ಘಟನೆಗಳನ್ನು ಹೊರತುಪಡಿಸಿ ಕ್ರೆಸ್ತರ ವಿರುದ್ಧದ ಹಿಂಸಾಚಾರಗಳು ಕಡಿಮೆ ತೀವ್ರತೆಯಿಂದ ಕೂಡಿದ್ದು, ಒಡಿಶಾದಲ್ಲಿ ಡಿಸೆಂಬರ್ 2007 ಮತ್ತು ಆಗಸ್ಟ್ 2008ರಲ್ಲಿ ನಡೆದ ಘಟನೆಗಳವರೆಗೆ ದಂಗೆ ಅಥವಾ ಕೋಮುದಳ್ಳುರಿಯ ರೂಪವನ್ನು ಪಡೆಯಲಿಲ್ಲ. ಇಂಥಾ ಘಟನೆಗಳು ಹೆಚ್ಚಾಗಿ ಅತೀಹೆಚ್ಚು ಬಡತನ ಮತ್ತು ಅನಕ್ಷರತೆ ಇರುವ ಕಡೆಗಳಲ್ಲಿ ನಡೆಯುತ್ತವೆ. ಈ ಪ್ರಮುಖ ವಿಷಯಗಳನ್ನು ಸುದ್ದಿ ಮಾಡದ ಮಾಧ್ಯಮದ ಒಂದು ವಿಭಾಗದ ಸೋಮಾರಿತನವು ಆಶ್ಚರ್ಯವುಂಟು ಮಾಡುತ್ತದೆ. ಅದೇ ಸಮಯದಲ್ಲಿ ಕ್ರೆಸ್ತ ಮಿಶನರಿಗಳ ವಿರುದ್ಧ ಬಾಯಿ ಮೂಲಕ ಹರಡಿದ ದ್ವೇಷದ ಪರಿಣಾಮವಾಗಿ ಅವರ ವಿರುದ್ಧದ ಪಿತೂರಿ ಮತ್ತಷ್ಟು ತೀವ್ರತೆ ಪಡೆಯಿತು.

ತೀರಾ ಹಳ್ಳಿ ಪ್ರದೇಶಗಳಲ್ಲಿ ದುಡಿಯುವ ಕ್ರೆಸ್ತ ಮಿಶನರಿಗಳು ಸುಲಭ ಗುರಿಗಳಾಗಿದ್ದಾರೆ ಮತ್ತು ಹೆಚ್ಚು ಶಿಕ್ಷೆಯಿಲ್ಲದೆ ಪಾರಾಗ ಬಹುದು ಎಂಬ ಸಂದೇಶವನ್ನು ಹರಡಲಾಯಿತು. ಮತ್ತು ತಳದಲ್ಲಿ ಕ್ರೆಸ್ತವಿರೋ ಹಿಂಸಾಚಾರಕ್ಕೆ ಆಧಾರವಾಗುವಂತೆ ಆದಿವಾಸಿ ಯುವಕರನ್ನು ಸಾಂಸ್ಕೃತಿಕವಾಗಿ ಕೆರಳಿಸುವ ಮೂಲಕ ಅವರನ್ನು ಕ್ರೆಸ್ತರ ವಿರುದ್ಧ ಎತ್ತಿಕಟ್ಟಲಾಯಿತು. ಆರೆಸ್ಸೆಸ್‌ನ ಅಂಗಸಂಸ್ಥೆಗಳ ಚಟುವಟಿಕೆಗಳಿಂದ ಸೃಷ್ಟಿಯಾದ ವಾತಾವರಣದಲ್ಲಿ ಧೈರ್ಯಪಡೆದು ಕೊಂಡ ಸ್ಥಳೀಯ ಕೋಮುಗುಂಪುಗಳು ಯಾವುದೇ ಸಣ್ಣಪುಟ್ಟ ವಿಷಯಗಳ ಮೇಲೂ ಹಿಂಸಾಚಾರ ನಡೆಸಲು ಆರಂಭಿಸಿದವು. ಇದರಿಂದ ಸಂತ್ರಸ್ತರ ಮೇಲಾದ ಪರಿಣಾಮ ಮಾತ್ರ ಆಘಾತಕಾರಿ ಯಾಗಿದೆ. ಇದರಿಂದ ಸ್ಥಳೀಯ ಸಮುದಾಯಗಳಲ್ಲಿ ಕ್ರೆಸ್ತ ಮತ್ತು ಕ್ರೆಸ್ತೇತರ ಎಂಬ ಪಂಗಡಗಳು ಸೃಷ್ಟಿಯಾಗಿ ಇವರ ಮಧ್ಯೆ ದ್ವೇಷದ ವಿಷಬೀಜ ಹಾಕಲಾಯಿತು.

ಸಾಂಸ್ಕೃತಿಕ ಸಿದ್ಧಾಂತ
ಈ ಪ್ರದೇಶಗಳಲ್ಲಿ ದೈಹಿಕ ಹಿಂಸಾಚಾರದ ಜೊತೆಗೆ ಸಾಂಸ್ಕೃತಿಕವಾಗಿ ತಿರುಚುವ ಕಾರ್ಯವೂ ನಡೆಯುತ್ತದೆ. ಆದಿವಾಸಿ ಗಳನ್ನು ಧಾರ್ಮಿಕ-ಸಾಂಸ್ಕೃತಿಕ ತಂತ್ರಗಳ ಮೂಲಕ ಮೌನವಾಗಿ ಹಿಂದೂಗಳಾಗಿ ಪರಿವರ್ತಿಸುವ ಕಾರ್ಯ ಕಳೆದ ಮೂರು ದಶಕಗಳಿಂದ ಬಿರುಸು ಪಡೆದಿದೆ. ಸ್ವಾಮಿ ಅಸೀಮಾನಂದ (ದಂಗ್ಸ್), ಸ್ವಾಮಿ ಲಕ್ಷ್ಮಣಾನಂದ (ಕಂದಮಾಲ್, ಒಡಿಶಾ, ಆಸಾರಾಮ್ ಬಾಪುರ ಅನುಯಾಯಿಗಳು (ಜಬುವಾ, ಮ.ಪ್ರ) ಈ ಪ್ರದೇಶಗಳಲ್ಲಿ ಹಿಂದೂ ದೇವತೆಗಳನ್ನು ಜನಪ್ರಿಯಗೊಳಿಸುವ ಕಾರ್ಯ ಆರಂಭಿಸಿದರು. ಹಿಂದೂ ಧರ್ಮದಲ್ಲಿರುವ ದೇವ/ದೇವತೆಗಳ ಅಷ್ಟೂ ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯನ್ನು ಮಾಡುವುದು ಜಾಣತನವಾಗಿತ್ತು. ಇಲ್ಲಿ ಶಬರಿ (ಬಡತನ ಮತ್ತು ಅಭಾವದ ಚಿಹ್ನೆ) ಆದಿವಾಸಿಗಳ ಮುಖ್ಯ ದೇವರಾಗಿತ್ತು. ಆಕೆಯ ಹೆಸರಲ್ಲಿ ದೇವಾಲಯಗಳನ್ನು ತೆರೆಯಲಾಯಿತು ಮತ್ತು ಆಕೆಯ ಹೆಸರಲ್ಲಿ ನಿಯಮಿತವಾಗಿ ಕುಂಭಗಳನ್ನು, ಜಾತ್ರೆಗಳನ್ನು ಆಚರಿಸಲಾಯಿತು. ಕುಂಭಗಳು ಪವಿತ್ರ ನದಿಗಳ ದಡದಲ್ಲಿ ಮುಖ್ಯವಾಗಿ ಗಂಗಾನದಿಯ ದಡದಲ್ಲಿ ನಿರ್ದಿಷ್ಟ ವರ್ಷಕ್ಕೊಮ್ಮೆ ನಡೆಯುವ ಹಿಂದೂ ಧರ್ಮದ ಸಾಂಪ್ರದಾಯಿಕ ಆಚರಣೆಯಾಗಿದೆ. ಇದೆ ಕುಂಭಗಳನ್ನು ಒಂದಷ್ಟು ಬದಲಿಸಿ ಆದಿವಾಸಿ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಇಲ್ಲಿ ಹಿಂದುತ್ವಕ್ಕೆ ಪರಿವರ್ತನೆ ಮತ್ತು ವಿದೇಶಿಗರು ಮುಖ್ಯವಾಗಿ ಕ್ರೆಸ್ತರ ವಿರುದ್ಧ ದ್ವೇಷ ಹರಡುವ ಕೆಲಸವನ್ನು ಮಾಡಲಾಗುತ್ತದೆ. ಇದರ ಜೊತೆಗೆ ವನವಾಸಿ ಕಲ್ಯಾಣ ಆಶ್ರಮದ ಗೆರೆಯನ್ನು ಉಲ್ಲಂಸುವವರ ವಿರುದ್ಧ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.
ಇದೇ ರೀತಿಯಲ್ಲಿ ರಾಮನ ಪರಮಭಕ್ತ ಹನುಮಂತ ದೇವರನ್ನು ಆತನ ಭಾವಚಿತ್ರವುಳ್ಳ ಲಾಕೆಟ್‌ಗಳನ್ನು ಹಂಚುವ ಮೂಲಕ ಮತ್ತು ಏಕಲ್ ಶಾಲೆ ಮತ್ತು ಸರಸ್ವತಿ ಶಿಶು ಮಂದಿರಗಳಲ್ಲಿ ಆತನ ಬಗೆಗಿನ ಕತೆಗಳನ್ನು ಹೇಳುವ ಮೂಲಕ ಜನಪ್ರಿಯಗೊಳಿಸಲಾಯಿತು. ಇದು ಆದಿವಾಸಿ ಪ್ರದೇಶಗಳಲ್ಲಿ ವಿಭಜನೆಯ ವಾತಾವರಣವನ್ನು ಸೃಷ್ಟಿಸಿತು; ಕ್ರೆಸ್ತರ ವಿರುದ್ಧ ಹಿಂದೂಗಳಾಗಿ ಪರಿವರ್ತಿತರಾದ ಆದಿವಾಸಿಗಳು, ಹಿಂದೂ ಮೇಲ್ವರ್ಗದ ಜನರು. ಈ ವಿಭಜನಾ ವಾತಾವರಣವೇ ಈ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೇಳಲು ಮೂಲಕಾರಣವಾಗಿದೆ.

1999ರ ಜನವರಿಯಲ್ಲಿ ದುಷ್ಕರ್ಮಿಗಳಿಂದ ಜೀವಂತ ಸುಡಲ್ಪಟ್ಟ ಪಾದ್ರಿ ಗ್ರಹಂ ಸ್ಟುವರ್ಡ್ ಸ್ಟೆನ್ಸ್ ಮತ್ತವರ ಇಬ್ಬರು ಮಕ್ಕಳಾದ ಫಿಲಿಪ್ ಮತ್ತು ಟಿಮೊತಿ

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News