×
Ad

ಪ್ರಗತಿಪರರ ವಿಘಟನೆ-ಪ್ರತಿಗಾಮಿ ಶಕ್ತಿಗಳಿಗೆ ಆಪ್ಯಾಯಮಾನ

Update: 2016-09-01 23:36 IST

ಜಾತಿ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬ ಉನ್ನತ ಆಶಯವನ್ನಿಟ್ಟುಕೊಂಡು ಒಂದೇ ದಿನ ಪ್ರಗತಿಪರರು ಎರಡು ಕಾರ್ಯಕ್ರಮ ಗಳನ್ನು ಕೆಲವು ತಿಂಗಳ ಹಿಂದೆ ಮಂಡ್ಯ ನಗರದಲ್ಲಿ ಹಮ್ಮಿಕೊಂಡರು. ಈ ವಿಷಯವನ್ನು ಅರಿತು ನನಗೆ ಅಚ್ಚರಿಯಾಗಲಿಲ್ಲ! ಪ್ರಗತಿಪರರ ಇಂತಹ ನಡವಳಿಕೆಗಳು ಹೊಸದೇನೂ ಅಲ್ಲ. ಇವು ಯಾವ ರೀತಿಯ ಸಂದೇಶ ಗಳನ್ನು ರವಾನಿಸುತ್ತವೆ? ಇವುಗಳಿಂದ ಯಾವ ಶಕ್ತಿಗಳಿಗೆ ಒಳಗೊಳಗೆ ಸಂತಸವಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿದರೆ ಬೇಸರವಾಗುತ್ತದೆ.

ಸಮಾಜಮುಖಿ ಚಳವಳಿಗಳಲ್ಲಿ ನಿರತರಾದವರಿಗೆ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎಂಬ ಘೋಷವಾಕ್ಯ ತಿಳಿದೇ ಇರುತ್ತದೆ. ನಿಜ, ಅನೇಕ ಪ್ರಗತಿಪರರು ಬದ್ಧತೆಯಿಂದ ಅನೇಕ ಚಳವಳಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಅನೇಕ ಅನುಪಮ ಕೊಡುಗೆಗಳನ್ನು ಸಮಷ್ಟಿಯ ಹಿತದಲ್ಲಿ ನೀಡುತ್ತಲಿದ್ದಾರೆ. ಆದರೆ ಎಷ್ಟು ನದಿಗಳು ಸಾಗರವನ್ನು ತಲುಪುತ್ತಿವೆ ಎಂಬ ಗಹನ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಆದಾಗ್ಯೂ ಇಂದಿನ ಕಾಲಘಟ್ಟದಲ್ಲಿ ಈ ಪ್ರಶ್ನೆ ಹಲವು ಪ್ರಗತಿಪರರನ್ನು ಕಾಡುತ್ತಿರುವುದಂತೂ ನಿಜ !
ನಮ್ಮದು ಬಹುತ್ವದ ನಾಡು. ಹೀಗಾಗಿ ಇಲ್ಲಿ ಅನಾದಿ ಕಾಲದಿಂದಲೂ ವಿಭಿನ್ನ ವಿಚಾರಧಾರೆಗಳು ನೆಲೆಗೊಂಡಿವೆ. ಅನೇಕ ಜನಪರ ಚಳವಳಿಗಳು ತಮ್ಮ ತಮ್ಮ ಅಸ್ಮಿತೆಗಳಡಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಅಂಚಿನಲ್ಲಿರು ವವರ, ಅಸಮಾನತೆಯಿಂದ ಬಾಳು ದುಸ್ತರವಾಗಿರುವ ಅಗಾಧ ಜನರನ್ನು ತಲುಪಲು ಶ್ರಮಿಸುತ್ತ್ತಾ ಬಂದಿವೆ. ಇಂತಹ ಚಳವಳಿಗಳಲ್ಲಿ ಅನೇಕ ಪ್ರಗತಿಪರರು ಸಕ್ರಿಯವಾಗಿದ್ದಾರೆ. ಅನೇಕ ಚಳವಳಿಗಳಿಗೆ ಸಮಾನ ಗುರಿಗಳಿವೆ; ಭಿನ್ನ ಕಾರ್ಯತಂತ್ರಗಳಿವೆ.ದರೆ ದಾರಿದ್ರ್ಯ, ಹಸಿವು, ಅನಕ್ಷರತೆ, ಸಂಪನ್ಮೂಲಗಳ ಅಸಮಾನ ಹಂಚಿಕೆ, ಜಾತೀಯತೆ, ಕೋಮುವಾದ, ಮೂಲಭೂತವಾದ ಮುಂತಾದ ಪಿಡುಗುಗಳು ನಮ್ಮ ಸಮಾಜವನ್ನು ಹುರಿದು, ಮುಕ್ಕಿ ತಿನ್ನುತ್ತಿವೆ ! ಇವುಗಳ ವಿರುದ್ಧ ಪ್ರಗತಿಪರರಿಂದ ಐಕ್ಯ ಹೋರಾಟಗಳು ಅಷ್ಟಾಗಿ ಸಾಧ್ಯವಾಗುತ್ತಿಲ್ಲ, ಏಕೆ? ಎಲ್ಲಿ ತಾಳ ತಪ್ಪುತ್ತಿದೆ ?
  ಮೇ1ರಂದು ಅಂತಾರಾಷ್ಟ್ರೀಯ ಶ್ರಮಿಕ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಕಾರ್ಮಿಕರೇ ಒಂದಾಗಿ, ನೀವು ನಿಮ್ಮ ಸಂಕೋಲೆಗಳಿಂದ ಹೊರಬರಬೇಕೆ ವಿನ: ಮತ್ಯಾವುದರಿಂದಲೂ ಅಲ್ಲ... ಎಂದು ಕಾರ್ಲ್ ಮಾರ್ಕ್ಸ್ ಹೇಳಿದ. ಆದರೆ ಇಂದಿಗೂ ಕಾರ್ಮಿಕರು, ಕಾರ್ಮಿಕ ಸಂಘಗಳು, ಸಂಘಟನೆಗಳು ಅನೇಕ ಸರಪಳಿಗಳಿಂದ ಬಾತರಾಗಿದ್ದಾರೆ/ರಾಗಿವೆ. ಕಾರ್ಮಿಕರು ಧರ್ಮ, ಜಾತಿ, ಪ್ರಾಂತ, ಭಾಷೆ ಇತ್ಯಾದಿಗಳ ನಡುವೆ ಹಂಚಿಹೋಗಿದ್ದಾರೆ. ೆಂಬಾವುಟ ಹಿಡಿದವರೇ ಮೇ ದಿನದಂದು ಬೇರೆ ಬೇರೆ ಸ್ಥಳಗಳಿಂದ ರ್ಯಾಲಿ ತೆಗೆಯುತ್ತಾರೆ; ಭಿನ್ನ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಒಂದೇ ವೇದಿಕೆಯಲ್ಲಿ ಸೇರಲು ಇವರಿಗೆ ಯಾವ ಕಗ್ಗಂಟುಗಳಿವೆ? ನಮ್ಮ ದೇಶದ ಕಾರ್ಮಿಕ ವರ್ಗದ ಮೇಲೆ ಅವ್ಯಾಹತ ದಾಳಿಗಳಾಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ಭಿನ್ನ ನಡೆಗಳು ಏನನ್ನು ಸೂಚಿಸುತ್ತವೆ?ನ್ನು ರಾಜಕೀಯರಂಗದತ್ತ ಗಮನ ಹರಿಸಿದರೆ, ಅಲ್ಲೂ ಸಮಾನ ಧ್ಯೇಯಗಳುಳ್ಳ, ಪ್ರಗತಿಪರ ಪಕ್ಷಗಳ ನಡುವೆ ಹೆಚ್ಚಿನ ಮಟ್ಟದ ಹೊಂದಾಣಿಕೆ ಇಲ್ಲದೆ ಇರುವುದು ಕಂಡು ಬರುತ್ತದೆ. ಹೌದು, ಅಂತಹ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳು ಹೆಣೆಯುವ ಕಾರ್ಯವಿಧಾನಗಳು ಬೇರೆಯಾಗಿರುತ್ತವೆ. ಇವು ಸಹಜ ಕೂಡ. ಆದರೂ ಸಮಾನ ಗುರಿಗಳ ಸಾಧನೆಗಾಗಿ ಅವು ಸಮನ್ವಯತೆಯ ನಡಿಗೆಗೆ ಸೊಪ್ಪು ಹಾಕುವುದಿಲ್ಲ.
 ಪ್ರಗತಿಪರ ಕಮ್ಯುನಿಸ್ಟ್ ಪಕ್ಷಗಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಒಂದು ಅಂದಾಜಿನಂತೆ, ನಮ್ಮ ದೇಶದಲ್ಲಿ ಇಪ್ಪತ್ತಕ್ಕೂ ಮೇಲ್ಪಟ್ಟು ಕಮ್ಯುನಿಸ್ಟ್ ಪಕ್ಷಗಳಿವೆ. ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) 1925ರಲ್ಲಿ ಜನ್ಮ ತಳೆಯಿತು. ಅದು 1964ರಲ್ಲಿ ವಿಭಜನೆಗೊಂಡು ಕಮ್ಯುನಿಸ್ಟ್ ಪಕ್ಷ (ಮಾರ್ಕ್ವಿಸ್ಟ್- ಸಿಪಿಎಂ) ಅಸ್ತಿತ್ವಕ್ಕೆ ಬಂದಿತು. 1967ರಲ್ಲಿ ಮಾರ್ಕ್ವಿಸ್ಟ್ ಪಕ್ಷ ಒಡೆದು, ನಕ್ಸಲ್‌ವಾದದ ಪರವಾದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ವಿಸ್ಟ್ಟ್ - ಲೆನಿನಿಸ್ಟ್) ಉದಯಿಸಿತು. ನಕ್ಸಲೀಯರು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಶಸಾಸ ಹೋರಾಟ ಮಾರ್ಗವನ್ನು ಕೈಬಿಟ್ಟು, ಸಂಸದೀಯ ಪಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಎರಡು ಮುಖ್ಯ ಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ ಏಕೆ ಒಂದಾಗುತ್ತಿಲ್ಲ ? 1964ರಲ್ಲಿದ್ದ ಸೈದ್ಧಾಂತಿಕ ಅಭಿಪ್ರಾಯಗಳು ಈಗಲೂ ಪ್ರಸ್ತುತವೇ? ಅಂದಿನಿಂದ ಇಂದಿನವರೆಗೂ ಅನೇಕ ನದಿಗಳಲ್ಲಿ ಎಷ್ಟೋ ನೀರು ಹರಿದು ಹೋಗಿದೆ. ಎಡರಂಗವೇನೋ ಇದೆ. ಜಂಟಿ ಹೋರಾಟಗಳೂ ಜರಗುತ್ತಿವೆ. ಆದರೆ ಅವುಗಳಿಗೆ ಸೀಮಿತತೆಗಳಿವೆ. ಸಾಮಾನ್ಯ ಜನತೆಗೆ ಕೂದಲು ಸೀಳುವ ಸೈದ್ಧಾಂತಿಕ ವಿಚಾರಗಳು ತಲುಪುವುದಿಲ್ಲ.
ಯಾವ ಗುಂಪು/ಸಮುದಾಯ, ಇನ್ನಿತರ ಸಂರಚನೆಗಳು ಅಥವಾ ಜನ ಶೋಷಣೆಯನ್ನು ಎದುರಿಸುತ್ತವೆಯೋ/ಎದುರಿಸುತ್ತಾರೋ ಅವೇ/ಅವರೇ ಅದನ್ನು ಅರ್ಥೈಸಬಲ್ಲವು/ಅರ್ಥ್ಯೆಸಬಲ್ಲರು ಹಾಗೂ ಅದರ ವಿರುದ್ಧ ಹೋರಾಡಬಲ್ಲವು/ಹೋರಾಡಬಲ್ಲರು ಎಂಬುದು ಅಸ್ಮಿತೆಯ ರಾಜಕಾರಣದ ತಾತ್ವಿಕ ಅಸ್ತಿಭಾರ. ಅಸ್ಮಿತೆಯ ರಾಜಕಾರಣದ ತೀವ್ರ ಪ್ರತಿಪಾದನೆ ಹಾಗೂ ಕಾರ್ಯಾಚರಣೆ ಸಂಯುಕ್ತ ಜನಪರ ಹೋರಾಟಗಳಿಗೆ ತಡೆಗೋಡೆಗಳಾಗಿವೆ ಎಂಬುದರತ್ತ ಕೆವು ರಾಜಕೀಯ ಮತ್ತು ಸಮಾಜಶಾಸೀಯ ವಿಶ್ಲೇಷಕರು ಗಮನವನ್ನು ಸೆಳೆಯುತ್ತಾರೆ. ಎಡಪಂಥೀಯರೂ ಈ ನಿಲುವನ್ನು ಸಮರ್ಥಿಸುತ್ತಾರೆ. ಅಸ್ಮಿತೆಯ ರಾಜಕಾರಣ ಸಹ ಒಂದರ್ಥದಲ್ಲಿ ಪ್ರಗತಿಪರರ ನಡುವೆ ಅನೈಕ್ಯತೆಯನ್ನು ಉಂಟುಮಾಡುವ ಪಾತ್ರ ವಹಿಸಿದೆ ಎಂದು ಹೇಳಬಹುದು.ಾರ್ಮಿಕರು, ದಲಿತರು, ರೈತರು, ಸಮಾಜದ ಅಂಚಿನಲ್ಲಿರುವವರು, ಇತರ ದುಡಿಯುವ ಜನರು ಹಾಗೂ ಅವರ ಹಿತಾಸಕ್ತಿಗಳಿಗಾಗಿ ಹೋರಾಡುತ್ತಿರುವ ಪ್ರಗತಿಪರ ಸಂಘಟನೆಗಳು/ರಾಜಕೀಯ ಪಕ್ಷಗಳು ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿಯಾದರೂ ಒಗ್ಗೂಡಿ ಜನತೆಗೆ ಪರ್ಯಾಯ ನೀತಿಗಳನ್ನು ನಿರೂಪಣೆ ಮಾಡಿ, ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖರಾಗುವುದಕ್ಕೆ ಇದು ಸಕಾಲ. ಬಲಪಂಥೀಯರು ಅಕಾರ ಚುಕ್ಕಾಣಿಯನ್ನು ಹಿಡಿದಿರುವುದರ ಹಿಂದೆ ಪ್ರಗತಿಪರರ ಭಿನ್ನ ನಡೆಗಳೂ ಒಂದು ಕಾರಣ. ಪ್ರಗತಿಪರರ ನಡುವೆ ಸಾಮರಸ್ಯ ಇಲ್ಲದೆ ಇರುವುದು ಇನ್ನೊಂದು ಕಾರಣ. ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಆದ ಆಕ್ರಮಣಗಳ ತರುವಾಯ ಪ್ರಗತಿಪರ ವಿದ್ಯಾರ್ಥಿ ಚಳವಳಿಗಳಲ್ಲಿ ಒಂದು ಹಂತದ ಮೈತ್ರಿ ಮೂಡುತ್ತಿರುವ ಚಿಹ್ನೆಗಳು ಕಾಣಿಸುತ್ತಿವೆೆ. ಇದು ಸಕಾರಾತ್ಮಕ ಬೆಳವಣಿಗೆ.ತ್ತೀಚಿನ ದಶಕಗಳಲ್ಲಿ ಕೋಮುವಾದದ ಕರಾಳ ನರ್ತನ ನಮ್ಮ ದೇಶದ ಅನೇಕ ಭಾಗಗಳಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದೆ. ಕೋಮು ಗಲಭೆಗಳಲ್ಲಿ ಪ್ರಾಣ ಮತ್ತು ಆಸ್ತಿ ಹಾನಿ ಸಂಭವಿಸುತ್ತವೆ. ಇವುಗಳಿಗೆ ಅಮಾಯಕರೇ ಬಲಿಯಾಗುವುದು ಜಾಸ್ತಿ. ಅಲ್ಲದೆ ಕ್ರಮೇಣ ಸಾರ್ವಜನಿಕ ವಲಯದಲ್ಲಿನ ಸೆಕ್ಯುಲರ್ ಸ್ಪೇಸಸ್ ಮಸುಕಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೂ ಆಗುತ್ತಿದೆ. ಪ್ರಗತಿಪರರು ಈ ತರಹದ ಸವಾಲುಗಳನ್ನು ಎದುರಿಸುತ್ತಿದ್ದಾರೆ, ನಿಜ. ಆದರೆ ಈ ವಿಷಯದಲ್ಲೂ ಸಂಯುಕ್ತ ಹೋರಾಟ ಗಳು ಹೆಚ್ಚಾಗಿ ಜರಗುತ್ತಿಲ್ಲ. ಇದೊಂದು ದೊಡ್ಡ ಕೊರತೆ.ಾಲವಿನ್ನೂ ಮಿಂಚಿಲ್ಲ. ದಾರ್ಶನಿಕ ನೋಟದಿಂದ ಪ್ರಗತಿಪರರು ಜೊತೆಜೊತೆಯಾಗಿ ಮುನ್ನಡೆದರೆ ನಮ್ಮ ದೇಶಕ್ಕೆ ಒಳಿತು; ಜನತೆಗೂ ಕೂಡ.

Writer - ಮ. ಶ್ರೀ. ಮುರಳಿ ಕೃಷ್ಣಾ

contributor

Editor - ಮ. ಶ್ರೀ. ಮುರಳಿ ಕೃಷ್ಣಾ

contributor

Similar News