ಪಾಕಿಸ್ತಾನದ ಕೋರ್ಟ್ ಆವರಣದಲ್ಲಿ ಅವಳಿ ಬಾಂಬುಸ್ಫೋಟ

Update: 2016-09-02 07:09 GMT

 ಪೇಶಾವರ, ಸೆ.2: ಇಲ್ಲಿನ ಮರ್ದಾನ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಅವಳಿ ಬಾಂಬುಸ್ಫೋಟದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 52 ಮಂದಿ ಗಾಯಗೊಂಡಿದಾರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಈ ತನಕ 12 ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಮೃತರ ಪೈಕಿ ವಕೀಲರುಗಳು, ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕರು ಸೇರಿದ್ದಾರೆ. ನಾವು 52 ಮಂದಿಯನ್ನು ರಕ್ಷಿಸಿದ್ದು, ಅವರಿಗೆ ಗಾಯವಾಗಿದೆ ಎಂದು ಮುಖ್ಯ ಭದ್ರತಾಧಿಕಾರಿ ಹ್ಯಾರಿಸ್ ಹಬೀಬ್ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಜನರು ಸೇರಿದ್ದ ವೇಳೆ ದಾಳಿ ನಡೆಸಿದ್ದ ಉಗ್ರಗಾಮಿಗಳು ಮೊದಲಿಗೆ ಗ್ರೆನೆಡ್‌ಗಳನ್ನು ಎಸೆದಿದ್ದರು. ಈ ತನಕ ಯಾವುದೇ ಸಂಘಟನೆ ದಾಳಿಯ ಹೊಣೆಹೊತ್ತಿಲ್ಲ. ಮೂರು ವಾರಗಳ ಹಿಂದೆ ಕ್ವೆಟ್ಟಾದಲ್ಲಿ ನಡೆದ ಆತ್ಮಹತ್ಯಾ ಬಾಂಬುಸ್ಫೋಟದಲ್ಲಿ ಹಲವು ವಕೀಲರು ಸಾವನ್ನಪ್ಪಿದ್ದರು.

ಶುಕ್ರವಾರ ಬೆಳಗ್ಗೆ ಕ್ರಿಶ್ಚಿಯನ್ ಕಾಲನಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕ ಹಾಗೂ ನಾಲ್ವರು ಶಂಕಿತ ಉಗ್ರಗಾಮಿ ಹತನಾಗಿದ್ದಾನೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News