×
Ad

ಎರಡೇ ವಾರದಲ್ಲಿ ನೋಟ್ 7 ಹಿಂಪಡೆದ ಸ್ಯಾಮ್ ಸಂಗ್

Update: 2016-09-02 15:07 IST

ಹೊಸದಿಲ್ಲಿ, ಸೆ. 2 : ಸ್ಯಾಮ್ ಸಂಗ್ ನ ನೂತನ ದುಬಾರಿ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ನೋಟ್ 7 ನಲ್ಲಿ ಬ್ಯಾಟರಿಯಲ್ಲಿ ಲೋಪವಿದೆ ಎಂದು ಕಂಡುಕೊಂಡ ಬಳಿಕ ಜಗತ್ತಿನಾದ್ಯಂತ ಈ ಹೊಸ ಫೋನನ್ನು ಹಿಂಪಡೆಯಲು ಕಂಪೆನಿ ನಿರ್ಧರಿಸಿದೆ. 

ಇತ್ತೀಚಿಗೆ ದಕ್ಷಿಣ ಕೊರಿಯಾದಲ್ಲಿ ಈ ಹೊಸ ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ  ಸ್ಪೋಟಗೊಂಡ ವರದಿಗಳು ಬಂದ ಬಳಿಕ ಕಂಪೆನಿ ಈ ಬಗ್ಗೆ ಸವಿವರ ತನಿಖೆ ನಡೆಸಿತ್ತು. ಕಳೆದ ಆಗಸ್ಟ್ ೧೯ ರಂದು ಈ ಹೊಸ ಫೋನ್ ಬಿಡುಗಡೆಯಾಗಿತ್ತು. ಸ್ಯಾಮಸಂಗ್ ಈಗ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದು ಶುಕ್ರವಾರ ಈ ಬಗ್ಗೆ ಕಂಪೆನಿ ಪತ್ರಿಕಾ ಗೋಷ್ಠಿ ಏರ್ಪಡಿಸುವ ಸಾಧ್ಯತೆ ಇದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News