ಹೃದಯಾಘಾತದಿಂದ ಉಜ್ಬೇಕ್ ಅಧ್ಯಕ್ಷ ಇಸ್ಲಾಮ್ ಕರಿಮೋವ್ ನಿಧನ
Update: 2016-09-02 15:21 IST
ತಾಶ್ಕೆಂಟ್, ಸೆ. 2: ಪಾರ್ಶ್ವವಾಯುವಿಗೆ ಒಳಗಾಗಿದ್ದ ಉಝ್ಬೆಕಿಸ್ತಾನದ ಅಧ್ಯಕ್ಷ ಇಸ್ಲಾಮ್ ಕರಿಮೊವ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಶನಿವಾರದಿಂದ ಆಸ್ಪತ್ರೆಯಲ್ಲಿರುವ ಕರಿಮೊವ್‌ರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂಬುದಾಗಿ ಉಝ್ಬೆಕ್ ಸರಕಾರ ಶುಕ್ರವಾರ ಬೆಳಗ್ಗೆ ಹೇಳಿಕೆಯೊಂದರಲ್ಲಿ ತಿಳಿಸಿತ್ತು.
‘‘ಹೌದು, ಅವರು ನಿಧನರಾಗಿದ್ದಾರೆ’’ ಎಂದು ರಾಜತಾಂತ್ರಿಕ ಮೂಲವೊಂದು ತಿಳಿಸಿದೆ.
ಕರಿಮೊವ್ 1989ರಿಂದ ಉಝ್ಬೆಕಿಸ್ತಾನವನ್ನು ಆಳಿದ್ದಾರೆ. ಆರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥನಾಗಿ ಹಾಗೂ 1991ರಿಂದ ನೂತನ ಸ್ವತಂತ್ರ ರಿಪಬ್ಲಿಕ್‌ನ ಅಧ್ಯಕ್ಷರಾಗಿ.
ಕರಿಮೊವ್ ತನ್ನ ಉತ್ತರಾಧಿಕಾರಿಯಾಗಿ ಯಾರನ್ನೂ ನಿಯೋಜಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.