ಯೋಗೇಶ್ವರ್ ಗೆ ಒಲಿಂಪಿಕ್ ಚಿನ್ನ !!

Update: 2016-09-02 13:36 GMT

ಹೊಸದಿಲ್ಲಿ, ಸೆ. 2 :2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಗೆದ್ದ ಕಂಚಿನ ಪದಕ ಬೆಳ್ಳಿಗೆ ಭಡ್ತಿಯಾಗುವ ಶುಭ ಸುದ್ದಿ ಬಂದ ಕೆಲವೇ ದಿನಗಳಲ್ಲಿ ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಗೆ ಇನ್ನೊಂದು ಬಂಪರ್ ಸುದ್ದಿ ಬಂದಿದೆ. ಅಂದಿನ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸ್ಪರ್ಧಿಯೂ ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿ ಬಿದ್ದಿರುವ ಕಾರಣ ಇದೀಗ ಚಿನ್ನದ ಪದಕ ಯೋಗೇಶ್ವರ್ ಪಾಲಾಗುತ್ತದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್ ಎಕ್ಸ್ ಕ್ಲೂಸಿವ್ ವರದಿ ಮಾಡಿದೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಅಝರ್ ಬೈಜಾನ್ ನ ತೊಗರುಲ್ ಅಸ್ಗರೋವ್ ಅವರು ಚಿನ್ನ ಪಡೆದಿದ್ದರು.

ಹೀಗಾದರೆ ಶೂಟರ್ ಅಭಿನವ್ ಬಿಂದ್ರಾ ಬಳಿಕ  ವೈಯಕ್ತಿಕ ಒಲಿಂಪಿಕ್ಸ್ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಕೀರ್ತಿಗೆ ಯೋಗೇಶ್ವರ್ ಪಾತ್ರರಾಗುತ್ತಾರೆ. 
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಬೀಜಿಂಗ್ ಹಾಗು ಲಂಡನ್ ಒಲಿಂಪಿಕ್ ಸಂದರ್ಭದಲ್ಲಿ ಸಂಗ್ರಹಿಸಿದ್ದ ಸ್ಪರ್ಧಾಳುಗಳ ಸ್ಯಾಂಪಲ್ ಗಳನ್ನು ಈಗ ಮರು ಪರೀಕ್ಷೆ ಮಾಡುತ್ತಿದೆ.

ಅವರು ಈಗಾಗಲೇ ತಾನು ಬೆಳ್ಳಿ ಪದಕ ತೆಗೆದುಕೊಳ್ಳುವುದಿಲ್ಲ. ಲಂಡನ್ ನಲ್ಲಿ ಬೆಳ್ಳಿ ಪದಕ ಪಡೆದು ಮತ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ರಷ್ಯಾದ ಬೇಸಿಕ್ ಕುಡುಕೋವ್ ಅವರ ಕುಟುಂಬವೇ ಅದನ್ನು ಇಟ್ಟುಕೊಳ್ಳಲಿ ಎಂದು ಹೇಳಿ ಜಗತ್ತಿನ ಗಮನ ಸೆಳೆದಿದ್ದರು. ಈಗ ಚಿನ್ನಕ್ಕೆ ಭಡ್ತಿ ಪಡೆದ ಮೇಲೆ ಅವರ ಪ್ರತಿಕ್ರಿಯೆ ಏನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News