2019 ರಲ್ಲಿ ಮತ್ತೆ ಮೋದಿ ಪ್ರಧಾನಿ ಆಗಲು ಬಯಸುವವರು ಎಷ್ಟು ಶೇ. ಜನ ?

Update: 2016-09-02 18:25 GMT

ಹೊಸದಿಲ್ಲಿ, ಸೆ.2: 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಎಪ್ಪತ್ತು ಶೇಕಡಾ ಮತದಾರರು - ಅದರಲ್ಲೂ ಹೆಚ್ಚಿನವರು ಯುವಜನತೆ - ಪ್ರಧಾನಿ ನರೇಂದ್ರ ಮೋದಿ ಅವರಿಗೇ ಇನ್ನೊಂದು ಅವಕಾಶ ನೀಡಲು ಬಯಸಿದ್ದಾರೆ ಎಂದು ನ್ಯೂಸ್ ಆಪ್ ಇನ್ ಶಾರ್ಟ್ಸ್ ಮಾರ್ಕೆಟಿಂಗ್ ಏಜೆನ್ಸಿ ಇಪ್ಸೋಸ್ ನೊಂದಿಗೆ ತನ್ನ ಆಪ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ. 
ಆದರೆ ಮೋದಿ ಸರಕಾರಕ್ಕೆ ಮಹಿಳೆಯರ ಬೆಂಬಲ ಕುಸಿದು 64 ಶೇಖಡಾಕ್ಕೆ ಇಳಿದಿದೆ ಎಂದು ಈ ಸಮೀಕ್ಷೆ ಹೇಳಿದೆ. 

ಸಮೀಕ್ಷೆಯಲ್ಲಿ ಭಾಗವಹಿಸಿದ 63,141 ಮಂದಿಯ ಪೈಕಿ 70 ಶೇ. ಜನರು ಮೋದಿಗೆ ಬೆಂಬಲ ಸೂಚಿಸಿದ್ದರೆ , 17 ಶೇ . ಮಂದಿ ಮತ್ತೆ ಮೋದಿ ಬೇಡ ಎಂದು ಹೇಳಿದ್ದಾರೆ. 13 ಶೇ. ಜನರು ತಾವು ಇನ್ನೂ ಈ ಬಗ್ಗೆ ನಿರ್ಧರಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 80% ಜನರು 35 ಕ್ಕಿಂತ ಕಡಿಮೆ ವಯಸ್ಸಿನವರು ಎಂದು ಇನ್ ಶಾರ್ಟ್ಸ್ ನ ಸಹಸ್ಥಾಪಕ ಹಾಗು ಸಿಇಒ ಅಝರ್ ಇಕ್ಬಾಲ್ ಹೇಳಿದ್ದಾರೆ. 
ಸಮೀಕ್ಷೆಯಲ್ಲಿ ಭಾಗವಹಿಸಿದ 57 ಶೇ. ಮಂದಿ ಕೆಲವು ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. 61 ಶೇ. ಜನರು ಕಾಲೇಜುಗಳಲ್ಲಿ ವಿದ್ಯಾರ್ಥಿ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News