‘ಆವಾಝ್-ಎ-ಪಂಜಾಬ್’ ನೂತನ ರಂಗ ಸ್ಥಾಪಿಸಿದ ಮಾಜಿ ಬಿಜೆಪಿ ಸಂಸದ ಸಿಧು
Update: 2016-09-02 23:13 IST
ಹೊಸದಿಲ್ಲಿ, ಸೆ.2: ಮಾಜಿ ಬಿಜೆಪಿ ಸಂಸದ ನವ ಜೋತ ಸಿಂಗ್ ಸಿಧು ಅವರು ‘ಆವಾಝ್-ಎ- ಪಂಜಾಬ್’ ಹೆಸರಿನ ನೂತನ ರಂಗವನ್ನು ಸ್ಥಾಪಿಸಿದ್ದ್ದು, ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಇದೊಂದು ರೀತಿಯಲ್ಲಿ ಆಪ್‌ಗೆ ಹಿನ್ನಡೆಯನ್ನುಂಟು ಮಾಡಿದೆ.
ಸಿಧು, ಪರ್ಗತ್ ಸಿಂಗ್ ಮತ್ತು ಬೇನ್ಸ್ ಸೋದರರು ಹುಟ್ಟುಹಾಕಿರುವ ‘ಆವಾಝ್-ಎ-ಪಂಜಾಬ್’ಗೆ ಮುಂದಿನ ವಾರ ವಿದ್ಯುಕ್ತ ಚಾಲನೆ ದೊರೆಯಲಿದೆ.
ಸಿಧು ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಬಯಸಿದ್ದಾರೆಂಬ ವರದಿಗಳ ನಡುವೆಯೇ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸಿಧು ಆಪ್ ಸೇರಲು ಯಾವುದೇ ಪೂರ್ವ ಷರತ್ತು ಹಾಕಿಲ್ಲ. ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಯೋಚಿಸಲು ಅವರಿಗೆ ಕಾಲಾವಕಾಶ ಅಗತ್ಯವಿದೆ ಮತ್ತು ನಾವು ಅದನ್ನು ಗೌರವಿಸಬೇಕಿದೆ ಎಂದು ಆ.19ರಂದು ಹೇಳಿದ್ದರು.