×
Ad

ಹೀಗೊಂದು ‘ಯುಟೋಪಿಯಾ’ ಕನಸು

Update: 2016-09-02 23:27 IST

ಅತಿಹೆಚ್ಚು ಮುಗ್ಧರನ್ನು, ಮೂರ್ಖರನ್ನು, ಅಮಾಯಕರನ್ನು ಮತ್ತು ಕಮಂಗಿಗಳನ್ನು ತುಂಬಿಕೊಂಡ ಸಮಾಜ ನಮ್ಮದು. ಹೀಗಾಗಿಯೇ ಇಲ್ಲಿ ಅನೇಕ ಸಲ ತರ್ಕಕ್ಕಿಂಥ ಹಟಮಾರಿತನ ಮೇಲುಗೈ ಸಾಧಿಸಿ ಬಿಡುತ್ತದೆ. ಇರಲಿಕ್ಕೊಂದು ಮನೆ, ಒಂದಿಷ್ಟು ಭೂಮಿ, ಮಾಡಲಿಕ್ಕೊಂದು ಕೆಲಸ, ಮೇಯಿಸಲು ಎರಡು ಹಸು, ತೊಡಲಿಕ್ಕೆ ಮೂರು ಜೊತೆ ಬಟ್ಟೆ? ಇವಿಷ್ಟು ಕೊಟ್ಟುಬಿಟ್ಟರೆ ಸಾಕು ದಲಿತರು ಆರಾಮವಾಗಿ ತಮ್ಮಪಾಡಿಗೆ ತಾವು ಇದ್ದುಬಿಡುತ್ತಾರೆ; ಇವಿಷ್ಟು ಕೊಟ್ಟುಬಿಟ್ಟರೇ ಸಾಕು ದಲಿತರ ಮೇಲೆ ಯಾವ ಅಟ್ರಾಸಿಟಿನೂ ನಡೆಯಲ್ಲ ಪಟ್ರಾಸಿಟಿನೂ ನಡೆಯಲ್ಲ, ಎಲ್ಲ ಎಲ್ಲವೂ ಸುಖವಾಗಿದ್ದು ಬಿಡುತ್ತವೆ ಎಂದು ಮುಗ್ಧವಾಗಿ ನಂಬಿಕೊಂಡ ಜನ ಸಮಾಜದಲ್ಲಿ ನಾನು ನೀವೆಲ್ಲ ಬದುಕುತ್ತಿದ್ದೀವಿ ಅನ್ನೋದೇ ಇವತ್ತಿನ ದುರಂತ.

ಇಚ್ಞಜಜ್ಞಿಜ ಠಿಠಿಛ್ಟ್ಞಿ ಟ್ಛ ಅಠ್ಟಿಟ್ಚಜಿಠಿಜಿಛಿ ಟ್ಞ ಈಚ್ಝಜಿಠಿ ಎಂಬ ಹೊಸದೊಂದು ಥಿಯರಿ ಈಗ ಹುಟ್ಟುಕೊಂಡಿದೆ. ದಲಿತನೊಬ್ಬ ತನ್ನ ಸ್ಥಾನಕ್ಕೆ ತಕ್ಕಂತೆ ಜಾತಿ ಶೋಷಣೆ, ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು ಅನುಭವಿಸುವ ವಿವಿಧ ಬಗೆಯನ್ನು ಮಂಡಿಸುವ ಹೊಸ ಸಿದ್ಧಾಂತವಿದು. ವಿಶ್ವವಿದ್ಯಾನಿಲಯದ ಡಿ-ಗ್ರೂಪ್ ನೌಕರನೊಬ್ಬ ತನ್ನ ವೃತ್ತಿ ತನ್ನ ಸ್ಥಾನಕ್ಕೆ ತಕ್ಕಂತೆ ಅತಿ ಹೀನ ಬರ್ಬರ ಅವಮಾನಗಳನ್ನು ಈ ಜಾತಿವ್ಯವಸ್ಥೆಯ ಸಮಾಜದಲ್ಲಿ ಅನುಭವಿಸಿದರೆ, ಉನ್ನತ ಹುದ್ದೆಯಲ್ಲಿರುವ ದಲಿತ ಕುಲಪತಿಗೂ ಅವನ ಸ್ಥಾನಕ್ಕೆ ತಕ್ಕಂತಹ ಶೋಷಣೆ, ತಾರತಮ್ಯಗಳನ್ನು ಜಾತಿಪ್ರಣೀತ ಮೇಲ್ಜಾತಿ ಮನಸ್ಸುಗಳು ದಂಡಿಯಾಗಿ ಕರುಣಿಸುತ್ತವೆ.
ಉನ್ನತ ಶಿಕ್ಷಣ, ಅಧಿಕಾರ ಕೇಂದ್ರದ ಸ್ಥಾನಗಳನ್ನು ದಲಿತರು ತಲುಪಿಬಿಟ್ಟರೆ ಸಾಕು ಅವರ ಮೇಲೆ ಯಾವ ಬಗೆಯ ದೌರ್ಜನ್ಯಗಳು ನಡೆಯುವುದಿಲ್ಲವೆಂದು ನಂಬಿಕೊಂಡಿರುವುದು ಮೇಲ್ಜಾತಿಗಳಲ್ಲ ಮುಗ್ಧ ದಲಿತರು. ಈ ತರಹದ ದಲಿತರು ಕೊನೆಯವರೆಗೂ ಮುಗ್ಧರಾಗಿಯೇ ಉಳಿದು ಬಿಡುತ್ತಾರೆ ಅನ್ನುವುದೇ ನನ್ನ ಆತಂಕಕ್ಕೆ ಮೂಲ ಕಾರಣ.
ಒಳ್ಳೇ ಸೋಪು, ಶ್ಯಾಂಪು, ಆಧುನಿಕ ಕ್ರೀಮು ತಿಕ್ಕಿ ಸ್ನಾನಮಾಡಿ ಶೋಷಿತನೊಬ್ಬ ಬೀದಿಗೆ ಬಂದುಬಿಟ್ಟರೆ ಸಾಕು ಅವನನ್ನು ಎಂಥ ಮೇಲ್ಜಾತಿಯ ಹೆಣ್ಣು ಸ್ವೀಕರಿಸಿ ಬಿಡುತ್ತಾಳೆ ಎಂದುಕೊಳ್ಳುವುದು ಹುಡುಗನೊಬ್ಬನ ಕಮರ್ಷಿಯಲ್ ಸಿನೆಮಾವೊಂದರ ರೊಮ್ಯಾಂಟಿಕ್ ಕನಸಾಗಿದ್ದರೆ ಸಮಸ್ಯೆಯೇನೂ ಇಲ್ಲ. ಆದರೆ ಇದು ವಾಸ್ತವದಲ್ಲೂ ನಡೆದೇ ತೀರುತ್ತದೆಂದು ನಂಬಿಕೊಳ್ಳುವುದು ಮಾತ್ರ ಮೂರ್ಖತನ.
ವ್ಯಕ್ತಿಯೊಬ್ಬ ಮುಗ್ಧನೋ ಅಮಾಯಕನೋ ಆಗಿದ್ದಾಗ ಆತನನ್ನು ಕನ್ವಿನ್ಸ್ ಮಾಡಲು ನೂರು ಯತ್ನಗಳನ್ನು ಮಾಡಬಹುದು. ಅದೇ ವ್ಯಕ್ತಿ ಮೂರ್ಖನೋ ಕಮಂಗಿಯೋ ಆಗಿದ್ದಾಗ ಇಂಥ ಕನ್ವಿನ್ಸ್ ಮಾಡುವ ಯತ್ನಗಳೇ ಮೂರ್ಖತನವಾಗಿ ಬಿಡುತ್ತವೆ. ಈ ಫೇಸ್ಬುಕ್ಕಿನಲ್ಲಿ ತಕ್ಷಣದ ತೀರ್ಪು ಜಾರಿಮಾಡಲು ಹೊರಡುವವರು ಹೀಗೆ ಶುದ್ಧ ಕಮಂಗಿಗಳಂತಾಡುತ್ತಿರುವುದನ್ನು ನಾನು ಹೆಚ್ಚು ಕಂಡಿದ್ದೇನೆ.
ಇರಲಿ, ಕೊನೆಗೊಂದು ಮಾತು: ‘ಯುಟೋಪಿಯಾ’ ಅನ್ನುವ ಸಿದ್ಧಾಂತವೊಂದು ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಬರುತ್ತದೆ. ‘ಯುಟೋಪಿಯಾ’ ಅನ್ನುವುದು ಒಂದು ಆದರ್ಶ ರಾಜ್ಯದ ಕಲ್ಪನೆ. ‘ಯುಟೋಪಿಯಾ’ ಎಂಬ ಆದರ್ಶ ರಾಜ್ಯಕ್ಕಾಗಿ ಕನಸು ಕಾಣುವುದು, ಧ್ಯಾನಿಸುವುದು ತಪ್ಪಲ್ಲ. ಇಲ್ಲಿ ‘ಯುಟೋಪಿಯಾ’ ದೇಶದ ಸ್ಥಾಪನೆಗಾಗಿ ಜಗತ್ತಿನ ಯಾರೂ ಬೇಕಾದರೂ ಕನಸು ಕಾಣಬಹುದು. ಆದರೆ, ಜಗತ್ತಿನ ಭೂಪಟ ಕೈಯಲ್ಲಿ ಹಿಡಿದು ‘ಯುಟೋಪಿಯಾ’ ಅನ್ನುವ ದೇಶಕ್ಕಾಗಿ ಹುಡುಕುವುದು ಮಾತ್ರ ಶುದ್ಧ ಮೂರ್ಖತನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News