×
Ad

ಹೊಸಪೇಟೆ ಸುತಮುತ್ತ ಜಾತಿ ವ್ಯವಸ್ಥೆ ಇನ್ನೂ ಜೀವಂತ!

Update: 2016-09-02 23:29 IST

ಮಾನ್ಯರೆ,

ಹೊಸಪೇಟೆ ಪಕ್ಕದ ಹಳ್ಳಿಯಲ್ಲಿ ಕೆಳವರ್ಗದ ಜನರು ಮೇಲ್ವರ್ಗದ ಜನರ ಹೊಲದ ಕೆಲಸಕ್ಕೆ ಹೋಗಿ, ಕೆಲಸ ಮುಗಿದ ಮೇಲೆ ಕುಡಿಯಲು ನೀರು ಕೇಳಿದಾಗ ಲಿಂಗಾಯತರು ಮಾದಿಗ ಜನರಿಗೆ ಕೈಯಲ್ಲಿ ನೀರನ್ನು ಹಾಕುತ್ತಾರೆ. ಹೀಗೆ ಇನ್ನೂ ಕೂಡ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇನ್ನೊಂದು ಪರಿಸ್ಥಿತಿಯನ್ನು ಪರಿಗಣಿಸಿದಾಗ ಒಂದು ವೇಳೆ ಮಾದಿಗ ಹುಡುಗ ಲಿಂಗಾಯತ ಹುಡುಗಿಯನ್ನು ಪ್ರೀತಿ ಮಾಡಿದರೆ ಲಿಂಗಾಯತ ಕುಟುಂಬದವರು ಆ ಹುಡುಗಿಗೆ ಬೆದರಿಕೆ ಹಾಕಿ ಆ ಪ್ರೀತಿಯನ್ನು ಅಲ್ಲಿಯೇ ಚಿವುಟಿ ಹಾಕುತ್ತಾರೆ. ಕೆಳವರ್ಗದ ಹುಡುಗನನ್ನು ಪ್ರೀತಿಸಬಾರದು ಎಂದು ಕಟ್ಟಪ್ಪಣೆ ಮಾಡುತ್ತಾರೆ. ಮಾದಿಗ ಜನಾಂಗದವರನ್ನು ಲಿಂಗಾಯತರು ತಮ್ಮ ಮನೆಯೊಳಗಡೆ ಕರೆದುಕೊಳ್ಳುವುದಿಲ್ಲ. ಮಾದಿಗ ಜನರನ್ನು ದೇವಸ್ಥಾನದ ಒಳಗಡೆ ಬಿಡುವುದಿಲ್ಲ. ಮಾದಿಗರನ್ನು ಊರಿನಲ್ಲಿ ಸತ್ತು ಬಿದ್ದಿರುವ ಪ್ರಾಣಿಯ ದೇಹವನ್ನು ಊರಿನಿಂದ ಹೊರಗಡೆ ಹಾಕಲು ಮಾದಿಗ ಜನರನ್ನು ಬಳಸಿಕೊಳ್ಳುತ್ತಾರೆ. ಮಾದಿಗರು ಮಾಂಸ ಸೇವನೆ ಮಾಡುತ್ತಾರೆ ಎಂದು ಅವರನ್ನು ನೋಡುವ ದೃಷ್ಟಿ ಬೇರೆಯಾಗಿರುತ್ತದೆ. ಹೀಗೆ ಅಸ್ಪಶ್ಯತೆ ಮತ್ತು ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ಜಾತಿ ವ್ಯವಸ್ಥೆಯನ್ನು ಕಿತ್ತುಹಾಕಲು ಸರಕಾರ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು ಹಾಗೂ ಜಾತಿ ನಿರ್ಮೂಲನೆ ಬಗ್ಗೆ ನಾಟಕವನ್ನು ಹಳ್ಳಿ ಹಳ್ಳಿಗಳಲ್ಲಿ ಮತ್ತು ಬೀದಿ ಬೀದಿಗಳಲ್ಲಿ ಮಾಡಿಸಿತೋರಿಸಬೇಕು! 

Writer - -ಜೈನಶ್ರೀ, ಹೋಸಪೇಟೆ

contributor

Editor - -ಜೈನಶ್ರೀ, ಹೋಸಪೇಟೆ

contributor

Similar News