ಭಾರತದ ಈ ಹೋಟೆಲ್ ಗೆ ಈಗ ಏಷ್ಯಾದಲ್ಲೇ ಶ್ರೇಷ್ಠ ಎಂಬ ಕೀರ್ತಿ
Update: 2016-09-03 19:59 IST
ಹೊಸದಿಲ್ಲಿ, ಸೆ. 3 : ಪ್ರತಿಷ್ಠಿತ ಪ್ರಯಾಣ ನಿಯತಕಾಲಿಕ ಕೊಂಡ್ ನಾಸ್ಟ್ ಟ್ರಾವೆಲರ್ ನಡೆಸಿರುವ ಸಮೀಕ್ಷೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿರುವ 2016ನೇ ಸಾಲಿಗೆ ತಾಜ್ ಲೇಕ್ ಪ್ಯಾಲೇಸ್ ಏಷ್ಯಾ ಖಂಡದಲ್ಲೇ ಶ್ರೇಷ್ಠ ಹೋಟೆಲ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೆರಿಬಿಯನ್ ದ್ವೀಪದ ಸೇಂಟ್ ಬರ್ಥ್ಸ್ ನಲ್ಲಿರುವ ಈಡನ್ ರಾಕ್ ಹೋಟೆಲ್ ವಿಶ್ವದ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
1746 ರಲ್ಲಿ ನಿರ್ಮಿತ , ಪಿಚೋಲಾ ಕೆರೆಯ ದ್ವೀಪದ ಮಧ್ಯದಲ್ಲಿರುವ ಈ ವೈಭವೋಪೇತ ಅರಮನೆ ಹೋಟೆಲ್ ಈ ಹಿಂದೆ ಜಗ್ ನಿವಾಸ್ ಹೆಸರಲ್ಲಿ ಕರೆಯಲ್ಪಡುತ್ತಿತ್ತು. ಇದರಲ್ಲಿ 17 ಗ್ರ್ಯಾನ್ಡ್ ಸ್ವೀಟ್ ಗಳು ಹಾಗು 60 ವಿಲಾಸಿ ರೂಮುಗಳಿವೆ. ದೇಶದ ಪ್ರತಿಷ್ಠಿತ , ದುಬಾರಿ, ವೈಭವದ ಮದುವೆ , ಮಧುಚಂದ್ರಗಳಿಗೆ ಖ್ಯಾತವಾಗಿರುವ ಈ ಹೋಟೆಲನ್ನು ದೇಶದ ಅತ್ಯಂತ ರೊಮ್ಯಾಂಟಿಕ್ ಹೋಟೆಲ್ ಎಂದೂ ಬಣ್ಣಿಸಲಾಗುತ್ತದೆ.
ಜೇಮ್ಸ್ ಬಾಂಡ್ ಸಹಿತ ಹಲವು ಬಾಲಿವುಡ್ ಸಿನೆಮಾಗಳ ಶೂಟಿಂಗ್ ಈ ಹೋಟೆಲ್ ನಲ್ಲಿ ನಡೆದಿದೆ.