×
Ad

ಆಮ್ ಆದ್ಮಿ ಪಕ್ಷದ ಸಂದೀಪ್ ' ಅಶ್ಲೀಲ ಸಿಡಿ' ಪ್ರಕರಣದಲ್ಲಿ ಹೊಸ ತಿರುವು

Update: 2016-09-03 21:03 IST

ಹೊಸದಿಲ್ಲಿ, ಸೆ. 3 : ಹೊಸ ಬೆಳವಣಿಗೆಯೊಂದರಲ್ಲಿ ಇತ್ತೀಚಿಗೆ ಅಶ್ಲೀಲ ಸಿಡಿಯೊಂದು ಬಹಿರಂಗವಾದ ಬಳಿಕ ದಿಲ್ಲಿ ಸಂಪುಟದಿಂದ ವಜಾಗೊಂಡ ಆಮ್ ಆದ್ಮಿ ನಾಯಕ ಸಂದೀಪ್ ಕುಮಾರ್ ವಿರುದ್ಧ ಆ ಸಿಡಿಯಲ್ಲಿ ಕಂಡು ಬಂದ ಮಹಿಳೆ ದೂರು ಸಲ್ಲಿಸಿದ್ದಾಳೆ. " ತಾನು ಪಡಿತರ ಚೀಟಿ ಸಂಬಂಧಿತ ಕೆಲಸಕ್ಕೆ ಹೋದಾಗ ತನಗೆ ಅಮಲು ಪದಾರ್ಥ ಹಾಕಿದ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪಿದ ಬಳಿಕ ಈ ವೀಡಿಯೊ ರೆಕಾರ್ಡ್ ಮಾಡಲಾಗಿದೆ " ಎಂದು ಆ ಮಹಿಳೆ ಆರೋಪಿಸಿದ್ದಾಳೆ. 
ನಾಲ್ಕು ದಿನಗಳ ಹಿಂದೆ ಸಂಪುಟದಿಂದ ವಜಾಗೊಂಡ ಸಂದೀಪ್ ಕುಮಾರ್ ಅವರನ್ನು ಶನಿವಾರ ಬೆಳಗ್ಗೆಯೇ ಪಕ್ಷದಿಂದಲೂ ಅಮಾನತು ಮಾಡಲಾಗಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News