×
Ad

ಸೌರವ್, ಜೋಶ್ನಾಗೆ ಸೋಲು

Update: 2016-09-03 23:41 IST

ಶಾಂೈ, ಸೆ.3: ಭಾರತದ ನ್ಯಾಶನಲ್ ಚಾಂಪಿಯನ್ ಸೌರವ್ ಘೋಷಾಲ್ ಹಾಗೂ ಜೋಶ್ನಾ ಚಿನ್ನಪ್ಪ ಚೀನಾ ಓಪನ್ ಸ್ಕ್ವಾಷ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

 ಶನಿವಾರ ಇಲ್ಲಿ ನಡೆದ 100,000 ಯುಎಸ್ ಡಾಲರ್ ಬಹುಮಾನ ಮೊತ್ತದ ಪಿಎಸ್‌ಎ ವರ್ಲ್ಡ್ ಟೂರ್ ಇವೆಂಟ್‌ನ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಘೋಷಾಲ್ ಈಜಿಪ್ಟ್‌ನ ಕರೀಮ್ ಅಬ್ದ್ದುಲ್ ಗವಾದ್ ವಿರುದ್ಧ 9-11, 3-11, 11-8, 11-5, 9-11 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಜೋಶ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ಕಾರ್ತಿಕ್ ಅವರು ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ.

ಅರ್ಹತಾ ಸುತ್ತಿನ ಮೂಲಕ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದ ದೀಪಿಕಾ ಈಜಿಪ್ಟ್‌ನ ನೌರಾನ್ ಗೋಹರ್ ವಿರುದ್ಧ 3-0 ಅಂತರದಿಂದ ಸೋತಿದ್ದಾರೆ.

ಇತ್ತೀಚೆಗಷ್ಟೇ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-10ನೆ ಸ್ಥಾನಕ್ಕೆ ಮರಳಿದ್ದ ಜೋಶ್ನಾ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕಿತೆ ಲೌರಾ ಮಸ್ಸಾರೊ ವಿರುದ್ಧ 7-11, 5-11,6-11 ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News