ಅಫ್ಘಾನಿಸ್ತಾನದಲ್ಲಿ ಬಸ್-ಟ್ಯಾಂಕರ್ ಡಿಕ್ಕಿ; 35 ಸಾವು
Update: 2016-09-04 12:41 IST
ಕಂಧಹಾರ್,ಸೆಪ್ಟಂಬರ್ 4: ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತವಾದ ಕಾಬೂಲಿನಲ್ಲಿ ಬಸ್‌ಮತ್ತು ಇಂಧನ ಟ್ಯಾಂಕರ್ ಢಿಕ್ಕಿಯಿಂದಾಗಿ ಮೂವತ್ತೈದು ಮಂದಿ ಮೃತರಾಗಿದ್ದಾರೆಂದು ವರದಿಯಾಗಿದೆ. ಕಂಧಹಾರ್‌ನಿಂದ ಕಾಬೂಲ್‌ಗೆ ಹೋಗುತ್ತಿದ್ದ ಬಸ್ ಮತ್ತು ಇಂಧನಟ್ಯಾಂಕರ್ ಅಭಿಮುಖವಾಗಿ ಢಿಕ್ಕಿಹೊಡೆದಿದೆ. ಅಪಘಾತದಲ್ಲಿಮೂವತ್ತೈದು ಮಂದಿ ಮೃತರಾದದ್ದೇ ಅಲ್ಲದೆ ಇಪ್ಪತ್ತು ಮಂದಿಗೆ ಗಾಯಗಳಾಗಿವೆ. ಢಿಕ್ಕಿಯ ರಭಸಕ್ಕೆ ಎರಡು ವಾಹನಗಳಿಗೂ ಬೆಂಕಿಹೊತ್ತಿಕೊಂಡಿದೆ.
ಸುಟ್ಟುಹೋಗಿರುವ ಹಲವರ ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಭಯೋತ್ಪಾದಕರ ಹಾವಳಿಯನ್ನು ತಪ್ಪಿಸಲಿಕ್ಕಾಗಿ ಕಾಬೂಲ್ ಕಂಧಹಾರ್ ಹೈವೆಯಲ್ಲಿ ಚಾಲಕರು ಅತೀವೇಗದಿಂದ ವಾಹನವನ್ನು ಚಲಾಯಿಸುತ್ತಾರೆ ಎಂದು ವರದಿ ತಿಳಿಸಿದೆ.