“ಸರಿ,ನಾನು ಸತ್ತಿದ್ದೇನೆ. ಆದರೆ ಈಗ ಬದುಕಿದ್ದೇನೆ..!” ಎಂದ ರಾಷ್ಟ್ರಾಧ್ಯಕ್ಷ
Update: 2016-09-04 17:12 IST
ಜೊಹಾನ್ಸ್‌ಬರ್ಗ್, ಸೆಪ್ಟಂಬರ್ 4: ಊಹಾಪೋಹಗಳಿಗೆ ಕೊನೆಗೂ ವಿರಾಮ ಹಾಕಿ ವಿದೇಶದಿಂದ ಜಿಂಬಾಬ್ವೆಗೆ ಮರಳಿರುವ ಅಧ್ಯಕ್ಷ ರಾಬರ್ಟ್ ಮುಗಾಬೆ "ಸರಿನಾನು ಸತ್ತಿದ್ದೇನೆ ಎಂಬುದು ಸರಿಯಾಗಿದೆ. ಯಾವಾಗಲೂ ನಾನು ಮರುಜೀವಗೊಳ್ಳುತ್ತೇನೆ,. ಈಗ ದೇಶಕ್ಕೆ ಮರಳಿ ಬಂದಿರುವುದು ನಿಜವಾದ ರಾಬಟ್‌ಮುಗಾಬೆಯೇ ಆಗಿದ್ದೇನೆ" ಎಂದು ತನ್ನ ಆನಾರೋಗ್ಯದ ನಿಮಿತ್ತ ಹರಡಿದ್ದ ಸುದ್ದಿಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ. ಗಂಭೀರ ರೋಗದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ದುಬೈಗೆ ಹೋಗಿದ್ದಾರೆ ಎಂದು ವದಂತಿಗಳು ಹರಡಿದ್ದವು. ಆಫ್ರಿಕದ ಅತ್ಯಂತ ಹಿರಿಯ ನಾಯಕ ಮುಗಾಬೆ ಆಗಿದ್ದಾರೆ. ತಾನು ಕುಟುಂಬಕ್ಕೆ ಸಂಬಂಧಿಸಿದ ಕೆಲವು ವಿಷಯಗಳಿಗಾಗಿ ದುಬೈಗೆ ಹೋಗಿದ್ದೆ ಎಂದು ತಿಳಿಸಿರುವ ಅವರು ಅನಾರೋಗ್ಯದಿಂದ ಬಳಲಿಹೋಗಿದ್ದರೂ ಯಾವಾಗಲೂ ತಾನು ಆರೋಗ್ಯದಿಂದಿದ್ದೇನೆ ಎಂದು 92 ವರ್ಷ ವಯಸ್ಸಿನ ಈ ಹಿರಿಯ ನಾಯಕ ಹೇಳುತ್ತಾ ಬಂದಿದ್ದಾರೆ ಎಂದು ವರದಿಯಾಗಿದೆ.