1ವರ್ಷದ ಮಗುವನ್ನು ಕಚ್ಚಿ ಎಳೆದೊಯ್ಯಲು ಪ್ರಯತ್ನಿಸಿದ ಬೀದಿ ನಾಯಿ!
ಕೋಡೂರ್,ಸೆಪ್ಟಂಬರ್ 4: ಮನೆಯೊಗಳಗೆ ಆಟ ಆಡುತ್ತಿದ್ದ ಎಳೆ ಮಗುವನ್ನು ಮನೆಯೊಳಗೆ ನುಗ್ಗಿ ಬಂದ ಬೀದಿನಾಯಿಯೊಂದು ಕಚ್ಚಿ ಎಳೆದೊಯ್ಯಲು ಯತ್ನಿಸಿದ ಘಟನೆ ಕೋಡೂರ್ ಚೆಮ್ಮಂಕಡವಿನ ಪಟ್ಟರ್‌ಕಡವ್ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ರಿಯಾರ್ ಎಂಬವರ ಒಂದು ವರ್ಷ ಎಳೆ ಹಸುಳೆ ಮೇಲೆ ಬೀದಿ ನಾಯಿ ದಾಳಿಮಾಡಿ ಕಚ್ಚಿ ಎಳೆದೊಯ್ಯಲು ಯತ್ನಿಸಿದಾಗ ಮಗುವಿನ ಮುಖಕ್ಕೆ ಮತ್ತು ತಲೆಗೆ ಗಾಯಗಳಾಗಿವೆ.
ನಿನ್ನೆ ಮನೆಯೊಳಗೆ ಆಟವಾಡುತ್ತಿದ್ದ ಮಗುವನ್ನು ಕಚ್ಚಿ ಎಳೆದುಕೊಂಡು ಓಡಿಹೋಗಲು ನಾಯಿ ಯತ್ನಿಸುತ್ತಿದ್ದುದನ್ನು ಗಮನಿಸಿದ ಮಗುವಿನ ತಾಯಿ ನಾಯಿಗೆ ಕುರ್ಚಿಯನ್ನು ಎಸೆದು ಹೊರಗೆ ಓಡಿ ಬಂದದ್ದರಿಂದ ನಾಯಿ ಮಗುವನ್ನು ಬಿಟ್ಟು ಬಿಟ್ಟಿತ್ತು. ತಾಯಿಯ ಬೊಬ್ಬೆ ಕೇಳಿ ಸೇರಿದ ಜನರಗುಂಪಿನ ಮೇಲೆಯೇ ನಾಯಿ ದಾಳಿಗೆ ಮುಂದಾದಾಗ ಅವರೆಲ್ಲರೂ ಸೇರಿ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ಹೇಗೋ ನಾಯಿ ಮನೆಯೊಳಗೆ ನುಗ್ಗಿ ಬಂದಿತ್ತು. ಅಲ್ಲೇ ಆಟವಾಡುತ್ತಿದ್ದ ಮಗುವನ್ನು ಕಚ್ಚಿ ಹೊರೆಗೆಳೆದುಕೊಂಡು ಹೋಗತೊಡಗಿತು. ಆಗ ತಾಯಿ ಕುರ್ಚಿ ಎಸೆದ್ದರಿಂದ ಮಗು ಪಾರಾಗಿದೆ. ಸ್ವಲ್ಪನಿರ್ಲಕ್ಷ್ಯ ಸಂಭವಿಸುತ್ತಿದ್ದರೂ ಮಗು ನಾಯಿಗೆ ಬಲಿಯಾಗುತ್ತಿತ್ತು. ಕೆಲವು ದಿವಸಗಳಿಂದ ಈ ಪ್ರದೇಶದಲ್ಲಿಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಗುಂಪುಗುಂಪಾಗಿ ನಾಯಿಗಳು ಸುತ್ತಾಡುತ್ತಿವೆ ಎಂದು ಊರವರು ಹೇಳುತ್ತಿದ್ದಾರೆ.ಈ ಘಟನೆಯ ನಂತರ ರಿಯಾರ್ನ ಮನೆಯವರು ಸಹಿತ ಈ ಪ್ರದೇಶದ ಜನರು ಭಯದಿಂದ ಕಂಪಿಸುತ್ತಿದ್ದಾರೆ. ಇದೇ ಪ್ರದೇಶದಲ್ಲಿ ಬೀದಿನಾಯಿಗಳು ಹತ್ತಕ್ಕೂ ಅಧಿಕ ಜನರನ್ನು ಈಗಾಗಲೇ ಕಚ್ಚಿದೆ. ಸಮೀಪದಲ್ಲಿ ಸಿವಿಲ್ ಠಾಣೆಯಿದ್ದು ಅಲ್ಲಿ ರಾಶಿಬಿದ್ದಿರುವ ವಾಹನಗಳಲ್ಲಿ ಬೀದಿನಾಯಿಗಳು ವಾಸ ಮಾಡಿಕೊಂಡಿವೆ ಎಂದು ಊರವರು ದೂರುತ್ತಿದ್ದಾರೆಂದು ವರದಿ ತಿಳಿಸಿದೆ. ಮಗು ಅಪಾಯದಿಂದ ಪಾರಾಗಿದೆ.