×
Ad

ಸೋಲೇ ಜೀವನದ ಅತಿದೊಡ್ಡ ಗುರು

Update: 2016-09-05 14:51 IST

ಮನುಷ್ಯನಿಗೆ ಅನುಭವ ಪಾಠ ಕಲಿಸುವುದಕ್ಕಿಂತ ಹೆಚ್ಚಿಗೆ ಬೇರ್ಯಾವುದು ಕಲಿಸಲು ಸಾಧ್ಯವಿಲ್ಲ. ಹುಟ್ಟಿನಿಂದ ಕಲಿಕೆ ಶುರುವಾಗುತ್ತೆ ಅಂದರೂ ಅದು ಭ್ರೂಣಾವಸ್ಥೆಯಲ್ಲಿಗೆ ಆರಂಭವಾಗಿರುತ್ತೆ. ನಾಲ್ಕು ಗೋಡೆಗಳ ಮೂಲಕ ಕಲಿಯುವುದೆ ಶಿಕ್ಷಣವೆಂದರೂ ಅದರಾಚೆಗೆ ಬೇಲಿಯಿಲ್ಲದ ಜಗ್ಗತ್ತಿನಲ್ಲಿ ಸಾವಿರಾರು ವಿಷಯಗಳನ್ನು ಕಲಿಯುತ್ತೇವೆ.ಬೆಳಗ್ಗೆ ಎದ್ದ ಕ್ಷಣದಿಂದ ಮಲಗಿ ನಿದ್ರಿಸುವ ತನಕವೂ, ಮತ್ತೆ ಬೀಳುವ ಕನಸಿನಲ್ಲೂ ಕಲಿಕೆ ಮುಂದುವರಿಯುತ್ತದೆ. ಪ್ರತಿಕ್ಷಣ ಕ್ಷಣವು ಮುನುಷ್ಯ ಅಪ್‌ಡೇಟ್ ಆಗ್ತಾನೆ ಇರ್ತಾನೆ. ಎಲ್ಲೂ ಅವನಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗುವುದಿಲ್ಲ.

ಅಮ್ಮ ಮೊದಲ ಗುರು. ಹೌದು ಇಲ್ಲಿ ಬಲಿಯದ ಕಂದನನ್ನ ಎದೆಯಾಳದಲ್ಲಿ ಜೋಪಾನವಾಗಿರಿಸಿಕೊಂಡು ಬದುಕುವ ಛಲವನ್ನು ಧಾರೆಯೆರೆಯುತ್ತಾಳೆ. ಅವಳ ಸಾನಿಧ್ಯದಲ್ಲಿ ಮಗು ಅಂಗೈಯಲ್ಲಿನ ಬೆಣ್ಣೆಯಂತೆ ಬೆಚ್ಚಗಿರುತ್ತೆ. ಅಮ್ಮನ ಸೆರಗು ಅದರ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ. ಶಾಲೆ ಎಂಬ ಅಂಗಳ ತಲುಪಿದಾಗ ಅಲ್ಲಿ ಹೊಸ ಹೊಸ ವಿಚಾರಗಳು ಕಲಿಯತೊಡಗುತ್ತೇವೆ. ಮಾತೃಭಾಷೆಯಿಂದ ಅನ್ಯ ಭಾಷೆಯವರೆಗೂ, ರಾಜ್ಯದಿಂದ ವಿದೇಶದವರೆಗೂ, ವಾಸ್ತವದಿಂದ ಕಲ್ಪನೆಯವರೆಗೂ ಎಲ್ಲವೂ ಕಲಿಯುತ್ತೇವೆ. ಹಾಗೆ ಕಲಿಸುವ ಗುರು ನಮ್ಮೆಲ್ಲರ ಅಚ್ಚರಿಯ ಕೇಂದ್ರ ಬಿಂದುವಾಗಿ ನಿಲ್ಲುತ್ತಾರೆ.

ಅಗೆದಷ್ಟು ಸಿಗುವ ಜ್ಞಾನವನ್ನು ತನ್ನೊಡಲೊಳಗೆ ಶೇಖರಿಸಿ ಕೊಂಡಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿ ತರುವಷ್ಟು ಸಂಗಿತಿಯಾಗಿರುತ್ತೆ. ಹಾಗೇ ಕಲಿಸುತ್ತಲೇ ಅವರು ಕಲಿಯುತ್ತಿರುತ್ತಾರೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೂ ಕಲಿಯುವ ಕಲಿಕೆಯಲ್ಲಿ ಶಾಲಾ ಗೋಡೆಗಳ ಆಚೆ ಕಲಿತಿರುವುದು ಬಹಳವಿರುತ್ತೆ. ಅದು ನಿಜಕ್ಕೂ ಜೀವನವನ್ನು ಗೆಲ್ಲುವುದಕ್ಕೆ ಸಹಕಾರಿ. ಅದರಲ್ಲೋ ಸೋಲು ಎನ್ನುವ ಅಫೀಮು ಅಘಾತಕಾರಿ. ಮೆಟ್ಟಿ ನಿಂತರೆ ನಮಗೆ ಸಾರಿಸಾಟಿ ಯಾರು ಇರುವುದಿಲ್ಲ. ನಾವು ಸೋಲಿನಿಂದ ಕಲಿತ ಪಾಠ ಎಂದಿಗೂ ಮರೆಯಲಾರೆವು. ಅಕ್ಷಣ ನಮ್ಮನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ ಸೋಲು ನಮ್ಮಲ್ಲಿ ಮೇಲೇರಬೇಕೆಂಬ ಕೆಚ್ಚೆದೆಯ ಕಿಡಿ ಹೊತ್ತಿಸುತ್ತದೆ.

ಥಾಮಸ್ ಅಲ್ವಾ ಒಂದೇ ಪ್ರಯೋಗದಿಂದ ಯಶಸ್ವಿಯಾಗಲಿಲ್ಲ. ಆತನ ಸೋಲುಗಳೇ ಮತ್ತಷ್ಟು ಕಲ್ಪನೆಗಳನ್ನು ಕೆದಕುವ ಹುಚ್ಚಿಗೆ ಆಸ್ಪದ ನೀಡಿದವು. ಶಾಲೆಯಿಂದ ಹೊರಬಿದ್ದರೂ ಅಮ್ಮನೆಂಬ ಗುರುವಿನ ಪ್ರೇರಕ ಶಕ್ತಿ ಆತನನ್ನು ಜಗತ್ತಿಗೆ ಬೆಳಕು ನೀಡುವಂತೆ ಮಾಡಿತು. ಉದಾಹರಣೆ ನೀಡಲು ಸಾವಿರಾರು ನಿದರ್ಶನಗಳಿವೆ. ಆದರೆ ಸೋತವನಿಗೆ ಮಾತ್ರ ಗೊತ್ತು ಅದು ಕಲಿಸುವ ಪಾಠ ಎಂತಹದ್ದು ಅಂತ. ನಿಜ ಸೋಲೇ ನನಗೆ ಗುರು. ಅತೀ ದೊಡ್ಡ ಗುರು. ಒಮ್ಮೆಯಾದರೂ ಸೋತು ಅದು ಹುಟ್ಟು ಹಾಕುವ ಗೆಲುವಿನ ಪರಿಯನ್ನು ಅಸ್ವಾದಿಸಿ.

Writer - ಸಂಗಮೇಶ ಡಿಗ್ಗಿ

contributor

Editor - ಸಂಗಮೇಶ ಡಿಗ್ಗಿ

contributor

Similar News