×
Ad

ಭಾರತದಲ್ಲಿ ವರ್ಷಕ್ಕೆ ಎಷ್ಟು ಲಕ್ಷ ನವಜಾತ ಶಿಶುಗಳು ಸಾವೀಗೀಡಾಗುತ್ತಿವೆ ಗೊತ್ತೇ ?

Update: 2016-09-05 15:07 IST

ನೈಜೀರಿಯಕ್ಕಿಂತ ಕೆಟ್ಟದಾಗಿದೆ ನಮ್ಮ ದೇಶದ ಪರಿಸ್ಥಿತಿ

ಕೊಲಂಬೊ,ಸೆಪ್ಟಂಬರ್ 5: ಆವಶ್ಯಕ ಚಿಕಿತ್ಸೆ ಮತ್ತು ಉಪಚಾರ ಸಿಗದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಒಂದುವರ್ಷದಲ್ಲಿ 55 ಲಕ್ಷ ಶಿಶುಗಳು ಸಾವನ್ನಪ್ಪುತ್ತಿವೆ. ಕೊಲಂಬೊದಲ್ಲಿ ನಡೆದ ಜಾಗತಿಕಾರೋಗ್ಯ ಸಂಘಟನೆಯ ಪ್ರತಿನಿಧಿಗಳ ರೀಜನಲ್ ಸಮಿತಿ ಸಭೆಯಲ್ಲಿ ಈ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಮುಖ್ಯವಾಗಿ ಬೆಳವಣಿಗೆ ಕುಂಠಿತ, ಹುಟ್ಟುವಾಗಿನ ಪ್ರತಿಕೂಲ ಸ್ಥಿತಿ, ವೈರಸ್ ಬಾಧೆ ಮುಂತಾದ ಕಾರಣದಿಂದ ಹುಟ್ಟುವ ಮೊದಲು, ಹುಟ್ಟಿದ 28 ದಿವಸಗಳಿಗಿಂತ ಮೊದಲು ನವಜಾತ ಶಿಶುಗಳು ಸಾವಿಗೆ ಶರಣಾಗುತ್ತಿವೆ. ಸರಿಯಾದ ಚಿಕಿತ್ಸೆ ಉಪಚಾರ ನೀಡಿದ್ದೇ ಆದರೆ ಇಂತಹ ಮೂರು ಲಕ್ಷ ಮಕ್ಕಳನ್ನಾದರೂ ರಕ್ಷಿಸಲು ಸಾಧ್ಯವಿದೆ ಎಂದು ಸಭೆಯಲ್ಲಿ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಯಿ-ಶಿಶು ಸಾವು, ಝಿಕಾ ವೈರಸ್ ಪ್ರತಿರೋಧಕ್ಕೆ ಶೀಘ್ರ ಕ್ರಮ, ಜಗತ್ತಿನ ವಿವಿಧ ಕಡೆಗಳಲ್ಲಿ ಬಡಕುಟುಂಬದ ಶಿಶುಗಳಿಗೆ ಅಂಟುತ್ತಿರುವ ಸಾಂಕ್ರಾಮಿಕ ರೋಗಗಳನ್ನು ತಡೆಯುವುದು ಜಾಗತಿಕ ಆರೋಗ್ಯಸಂಘಟನೆಯ ಪ್ರತಿನಿಧಿಗಳ ಐದು ದಿವಸಗಳ ಸಭೆಯ ಮುಖ್ಯ ಅಜೆಂಡಾವಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನೆಡ್ಡಾ ಸಹಿತ ಹದಿನೊಂದು ದೇಶಗಳ ಆರೋಗ್ಯ ಸಚಿವರುಸಭೆಯಲ್ಲಿ ಭಾಗವಹಿಸಿದ್ದಾರೆ.

ಶಿಶುಮರಣಗಳಲ್ಲಿ ಅರ್ಧಾಂಶಕ್ಕೂ ಹೆಚ್ಚು ಭಾರತ ಸಹಿತ ಐದುರಾಷ್ಟ್ರಗಳಲ್ಲಿ ಸಂಭವಿಸುತ್ತಿವೆ. ಇವುಗಳಲ್ಲಿ ಅತೀ ಹೆಚ್ಚು ಶಿಶುಗಳ ಸಾವು ಭಾರತದಲ್ಲಿಯೇ ನಡೆಯುತ್ತಿವೆ.ನೈಜೀರಿಯ ಎರಡನೆ ಸ್ಥಾನದಲ್ಲಿದೆ. ಭಾರತದಲ್ಲಿ ವರ್ಷದಲ್ಲಿ 7.79 ಲಕ್ಷ ಶಿಶುಗಳ ಸಾವು ಸಂಭವಿಸುತ್ತಿವೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನೈಜೀರಿಯಾದಲ್ಲಿ(2.76ಲಕ್ಷ), ಪಾಕಿಸ್ತಾನದಲ್ಲಿ(2.02ಲಕ್ಷ),ಚೀನ(1.57ಲಕ್ಷ), ಕಾಂಗೊ(1.18ಲಕ್ಷ) ಇತರ ಅತಿಹೆಚ್ಚು ಶಿಶು ಮರಣ ಸಂಭವಿಸುವ ರಾಷ್ಟ್ರಗಳೆಂದು ಸಭೆಯಲ್ಲಿಪ್ರಸ್ತಾವವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News