×
Ad

ಸತ್ಯದ ಮಾರ್ಗ ತೋರಿಸಿದ ಗುರು ಅಪ್ಪು ಪೂಜಾರಿ

Update: 2016-09-05 15:43 IST

ಅಲೆವೂರ ನೆಹರೂ ಪ್ರೌಢಶಾಲೆಯ ಹಿಂದಿ ಶಿಕ್ಷಕ ಅಪ್ಪು ಪೂಜಾರಿ ನನ್ನ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರಿದವರು. ಇಂದಿಗೂ ಅವರು ನನ್ನ ಅಚ್ಚು ಮುಚ್ಚಿನ ಶಿಕ್ಷಕರಾಗಿ ಮನದಾಳದಲ್ಲಿ ಮನೆ ಮಾಡಿದ್ದಾರೆ. ಅವರು ಹೇಳಿದ ಬದುಕಿನ ಪಾಠ ಈಗಲೂ ನನ್ನ ಕಣ್ಣ ಮುಂದೆ ಅಚ್ಚಳಿಯದೆ ಉಳಿದು ಕೊಂಡಿದೆ. ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು ನನಗೆ ಸತ್ಯದ ಮಾರ್ಗ ತೋರಿಸಿದ ಮಹಾನ್ ಗುರು.

ಕಲಿಕೆಯ ಸಂದರ್ಭದಲ್ಲಿ ಪಠ್ಯಕ್ಕಿಂತ ಬದುಕಿನ ಪಾಠಕ್ಕೆ ಆದ್ಯತೆ ನೀಡು ತ್ತಿದ್ದರು. ನನ್ನ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಅವರ ಮುತ್ತನಂತಹ ಒಂದೊಂದು ಮಾತು ಕೂಡ ನೆನಪಿಗೆ ಬರುತ್ತದೆ. ಆಗ ನಮಗೆ ತಮಾಷೆಯಾಗಿ ಕಾಣುತ್ತಿದ್ದ ಅವರ ಮಾತು ಇಂದು ಸತ್ಯ ಎಂಬುದಾಗಿ ಅರಿವಿಗೆ ಬರುತ್ತಿದೆ. ಎಲ್ಲ ಮಕ್ಕಳನ್ನು ಒಂದೇ ದೃಷ್ಠಿಯಲ್ಲಿ ನೋಡುತ್ತಿದ್ದ ಅವರು ಪಠ್ಯದ ಹೊರಗೂ ಬದುಕು ಇದೆ ಎಂದು ತೋರಿಸಿಕೊಟ್ಟವರು. ಸೌಹಾರ್ದ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದರು.

ನಾನು ಒಮ್ಮೆ ತರಗತಿಯಲ್ಲಿ ನನ್ನ ಸಹಪಾಠಿಯ ಪೆನ್ನು ಕದ್ದಿದ್ದೆ. ಆ ವಿಚಾರ ನಂತರ ನನ್ನ ಶಿಕ್ಷಕರಿಗೆ ಗೊತ್ತಾಯಿತು. ನನ್ನನು ಕರೆದ ಅವರು, ತಪ್ಪಿನ ಬಗ್ಗೆ ಹೇಳಿ ಸತ್ಯದ ಮಾರ್ಗದರ್ಶನ ಮಾಡಿದರು. ಇದು ಈಗಲೂ ನನ್ನ ಜೀವನದಲ್ಲಿ ಮರೆಯಲು ಆಗದ ಘಟನೆ. ಅವರ ಒಂದೊಂದು ಮಾತು ಕೂಡ ನನ್ನ ಕಿವಿಯಲ್ಲಿ ಗುನುಗುಡುತ್ತಿದೆ. ಇಂತಹ ಶಿಕ್ಷಕರು ಪ್ರತಿಯೊಂದು ವಿದ್ಯಾರ್ಥಿಗೂ ಸಿಗಬೇಕೆಂಬುದು ನನ್ನ ಆಶಯ. ನನಗೆ ಸತ್ಯದ ದಾರಿ ತೋರಿಸಿದ ಈ ಮಹಾನ್ ಗುರುವಿಗೆ ನನ್ನ ಸಲಾಂ.

Writer - ಉಮೇಶ್ ಶೆಟ್ಟಿಗಾರ್ ಉಡುಪಿ

contributor

Editor - ಉಮೇಶ್ ಶೆಟ್ಟಿಗಾರ್ ಉಡುಪಿ

contributor

Similar News