ಸಿರಿಯಾದಲ್ಲಿ ಬಾಂಬ್ ದಾಳಿ; 48 ಮಂದಿ ಬಲಿ
Update: 2016-09-05 22:47 IST
ಬೆರುತ್, ಸೆ.5: ಸಿರಿಯಾದ ಅಲ್ಲಲ್ಲಿ ಇಂದು ಬಾಂಬ್ ಸ್ಪೋಟಗೊಂಡ ಪರಿಣಾಮವಾಗಿ ನಲುವತ್ತೆಂಟು ಮಂದಿ ಬಲಿಯಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ತಾರ್ಟುಸ್ ನಗರದಲ್ಲಿ ಎರಡು ಬಾಂಬ್ ಸ್ಫೋಟಗೊಂಡಿವೆ. ಅರ್ಝುನಾ ಸೇತುವೆಯನ್ನು ಗುರಿಯಾಗಿರಿಸಿ ಎರಡು ಬಾಂಬ್ ದಾಳಿ ನಡೆದಿದೆ. ಮೊದಲು ಕಾರ‍್ ಬಾಂಬ್ ಸ್ಫೋಟಗೊಂಡಿತು. ಅಲ್ಲಿ ಜನರು ಗಾಯಗೊಂಡವರನ್ನು ಸಾಗಿಸಲು ನೆರವಾಗುತ್ತಿದ್ದಾಗ ಮಾನವ ಬಾಂಬರ್ ಒಬ್ಬ ಜನರ ಗುಂಪಿನತ್ತ ಧಾವಿಸಿ ಬಾಂಬ್ ಸ್ಫೋಟಿಸಿ ಹಲವರ ಸಾವಿಗೆ ಕಾರಣನಾಗಿದ್ದಾನೆ ಎಂದು ವರದಿ ತಿಳಿಸಿದೆ.