×
Ad

ವಿಶ್ವ ರ್ಯಾಂಕಿಂಗ್‌ನಲ್ಲಿ ಹಿನ್ನಡೆಯಾದರೂ ದೇಶದಲ್ಲಿ ನಂ.1 ಸ್ಥಾನ

Update: 2016-09-06 19:45 IST

ಹೊಸದಿಲ್ಲಿ,ಸೆ.6: ಕ್ಯೂಎಸ್ ವಿಶ್ವ ವಿವಿ ರ್ಯಾಂಕಿಂಗ್ ಪಟ್ಟಿಯು ಮಂಗಳವಾರ ಬಿಡುಗಡೆಗೊಂಡಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ(ಐಐಎಸ್‌ಸಿ)ವು ಭಾರತದಲ್ಲಿ ನ.1 ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ ವಿಶ್ವಮಟ್ಟದಲ್ಲಿ ಹಿನ್ನಡೆಯನ್ನು ಕಂಡು 152ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜಮಶೇದ್‌ಜಿ ನುಸೀರವಾನ್‌ಜಿ ಟಾಟಾ,ಮೈಸೂರು ಮಹಾರಾಜರು ಮತ್ತು ಭಾರತ ಸರಕಾರದ ಜಂಟಿ ಪ್ರಯತ್ನಗಳಿಂದಾಗಿ 1909ರಲ್ಲಿ ಸ್ಥಾಪನೆಗೊಂಡ ಐಐಎಸ್‌ಸಿ ಕಳೆದ ವರ್ಷ ವಿಶ್ವಮಟ್ಟದಲ್ಲಿ 147ನೆ ಸ್ಥಾನದಲ್ಲಿದ್ದು, ಜಗತ್ತಿನ ಶ್ರೇಷ್ಠ 150 ವಿವಿಗಳಲ್ಲಿ ಒಂದೆನಿಸಿಕೊಂಡಿತ್ತು.
ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳು ಪಟ್ಟಿಯಲ್ಲಿನ ಉನ್ನತ 400 ವಿವಿಗಳಲ್ಲಿ ಸ್ಥಾನ ಪಡೆದಿರುವ ಇತರ ಭಾರತೀಯ ವಿವಿಗಳಾಗಿವೆ. ಈ ಪೈಕಿ ಐಐಟಿ ದಿಲ್ಲಿ 185ನೇ ಸ್ಥಾನದಲ್ಲಿದ್ದರೆ, ಬಾಂಬೆ 219, ಮದ್ರಾಸ್ 249, ಕಾನಪುರ 302, ಖರಗಪುರ 313 ಮತ್ತು ರೂರ್ಕೀ 399ನೇ ಸ್ಥಾನದಲ್ಲಿವೆ.
 ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಟಾನಫೋರ್ಡ್ ವಿವಿ, ಹಾರ್ವರ್ಡ್ ವಿವಿ, ಕ್ಯಾಂಬ್ರಿಜ್ ವಿವಿ, ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಆಕ್ಸ್‌ಫರ್ಡ್ ವಿವಿ, ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್, ಇಟಿಎಚ್ ಝ್ಯುರಿಚ್, ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಶಿಕಾಗೋ ವಿವಿ ಇವು ಅನುಕ್ರಮವಾಗಿ ಮೊದಲ ಹತ್ತು ಸ್ಥಾನಗಳನ್ನು ಗಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News