ವಿದ್ಯುತ್ ಸಂಪರ್ಕವೇ ಇಲ್ಲದ ವ್ಯಕ್ತಿಗೆ 5,130 ರೂ. ವಿದ್ಯುತ್ ಬಿಲ್ !

Update: 2016-09-06 14:17 GMT

ಥಾಣೆ, ಸೆ. 6 : 600 ರೂಪಾಯಿ ಬಿಲ್ ಪಾವತಿಸದ ಕಾರಣ ಒಂದು ವರ್ಷದ ಹಿಂದೆಯೇ  ನಿಲ್ಲಿಸಲಾದ ವಿದ್ಯುತ್ ಸಂಪರ್ಕಕ್ಕೆ ಈಗ 5,130 ರೂಪಾಯಿಯ ಬಿಲ್ ಬಂದರೆ ಹೇಗಾಗಬೇಡ ? 

ಶಿಗ್ಗಾವ್ ನ ಹಕರಿಪಾಡದ ತುಂಡು ಭೂಮಿಯೊಂದರಲ್ಲಿ ತನ್ನ ಪತ್ನಿಯೊಂದಿಗೆ ಗುಡಿಸಲಲ್ಲಿ ಬದುಕುತ್ತಿರುವ ಬುಡಕಟ್ಟು ಜನಾಂಗದ ರಾಮು ಕೊಡ್ಯ ಹೇಮದ ಬಿಲ್ ಪಾವತಿಸಿಲ್ಲ ಎಂದು ವರ್ಷದ ಹಿಂದೆ ಅವರ ವಿದ್ಯುತ್ ಸಂಪರ್ಕವನ್ನು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ನಿಗಮ (MSEDCL ) ಕಟ್ ಮಾಡಿತ್ತು. ಮೇ 14, 2015 ರಂದು ಬಾಕಿ ಬಿಲ್ ಹಾಗು ಇತರ ಶುಲ್ಕವನ್ನು ಪಾವತಿಸಿರುವ ಹೇಮದ, ಕಳೆದ 15 ತಿಂಗಳಿಂದ ತನಗೆ  ವಿದ್ಯುತ್ ಸಂಪರ್ಕ ಮತ್ತೆ ನೀಡಿ ಎಂದು ಹೇಮದ ಅಧಿಕಾರಿಗಳನ್ನು ಬೇಡುತ್ತಿದ್ದಾರೆ. ಆದರೆ ಇಂದಿಗೂ ಕತ್ತಲಲ್ಲೇ ದಿನದೂಡುತ್ತಿರುವ ಅವರಿಗೆ ಈಗ  ಸಿಕ್ಕಿದ್ದು ವಿದ್ಯುತ್ ಅಲ್ಲ, ಬಳಸದ ವಿದ್ಯುತ್ ಗೆ ಬಂದಿರುವ ಸಾವಿರಾರು ರೂಪಾಯಿಯ ಬಿಲ್ ! 

" ನನಗೆ ಜುಲೈ ತಿಂಗಳ ಬಿಲ್ ಎಂದು ಕಳಿಸಿದ್ದಾರೆ ಮತ್ತು ನಾನು 826 ಯುನಿಟ್ ಬಳಸಿದ್ದೇನೆ ಎಂದು ಅದರಲ್ಲಿ ನಮೂದಿಸಲಾಗಿದೆ. ಲೈನ್ ಮ್ಯಾನ್ ಗಳು ನನ್ನ ವಿದ್ಯುತ್ ಮೀಟರನ್ನೇ ತೆಗೆದುಕೊಂಡು ಹೋಗಿರುವಾಗ ಹೀಗೆ ಬಿಲ್ ಬರುವುದು ಹೇಗೆ ? ಎಂಬುದು ಹೇಮದ ಪ್ರಶ್ನೆ. 

ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿಗಳು ಹೇಮದ ಅವರಿಗೆ ಶೀಘ್ರ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News