×
Ad

ಭಾರತ-ಪಾಕ್ ಮಹಿಳಾ ಕ್ರಿಕೆಟ್ ಸರಣಿ ದಿಢೀರ್ ರದ್ದು

Update: 2016-09-06 23:12 IST

ಲಾಹೋರ್, ಸೆ.6: ಅತ್ಯಂತ ನಿರೀಕ್ಷಿತ ಪಾಕಿಸ್ತಾನ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಿಗದಿಯಾಗಿದ್ದ ಸರಣಿ ಮಂಗಳವಾರ ರದ್ದುಗೊಂಡಿದೆ.

ಸೆ.7 ರಂದು ನಿಗದಿಯಾಗಿದ್ದ ಸರಣಿಯು ರದ್ದುಪಡಿಸಲಾಗಿದ್ದು, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಹಿಳಾ ಕ್ರಿಕೆಟ್ ವಿಂಗ್‌ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 ಸರಣಿ ರದ್ದುಗೊಂಡಿರುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ(ಐಸಿಸಿ) ಮಾಹಿತಿ ನೀಡಿದೆ. ಈ ವಿಷಯದ ಬಗ್ಗೆ ಬಿಸಿಸಿಐಯನ್ನು ಸಂಪರ್ಕಿಸದೇ ಇರಲು ಪಿಸಿಬಿ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಮಹಿಳಾ ಕ್ರಿಕೆಟ್ ಸರಣಿಯು 2019ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದ ಭಾಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News