ನೆರೆ ಬಂದಾಗ ಕರ್ನಾಟಕ ನೀಡಿದ ನೆರವು ಮರೆಯದಿರೋಣ
Update: 2016-09-07 16:58 IST
ಚೆನ್ನೈ , ಸೆ. 7 : ಕಾವೇರಿ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ, ನಟಿ ನಗ್ಮಾ ಅವರು ಕಳೆದ ಭಾರೀ ಪ್ರವಾಹದ ಸಂದರ್ಭದಲ್ಲಿ ಕರ್ನಾಟಕ ನೀಡಿದ ನೆರವನ್ನು ಸ್ಮರಿಸುವಂತೆ ತಮಿಳುನಾಡು ಸರಕಾರಕ್ಕೆ ಹೇಳಿದ್ದಾರೆ. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ತಮಿಳುನಾಡಿನ ಜನರಿಗೆ ಸಾಕಷ್ಟು ಸಹಾಯ ಮಾಡಿದೆ. ಇದನ್ನು ನೆನಪಿಡಬೇಕಾಗಿದೆ ಎಂದು ಹೇಳಿರುವ ನಗ್ಮಾ ನಮ್ಮ ಪಕ್ಷಕ್ಕೆ ಎರಡೂ ರಾಜ್ಯಗಳು ಸಮಾನವಾಗಿವೆ ಎಂದು ಸೇರಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಅವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಪಂದಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ಮಾಡಿದ್ದಲ್ಲ. ಎಂದು ನಗ್ಮಾ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.