ತಮ್ಮ ಮಕ್ಕಳನ್ನು ಬೇರೆ ಕಡೆ ಕಳಿಸಿ ಇತರರ ಮಕ್ಕಳನ್ನು ಬಲಿಪಶು ಮಾಡುತ್ತಿರುವ ಪ್ರತ್ಯೇಕತಾವಾದಿಗಳು: ಮೆಹಬೂಬ

Update: 2016-09-07 11:33 GMT

ಶ್ರೀನಗರ,ಸೆಪ್ಟಂಬರ್ 7: ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಂಘರ್ಷ ಮುಂದುವರಿಯುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿರುದ್ಧ ಕಟು ಟೀಕೆ ಪ್ರಹಾರ ನಡೆಸಿದ್ದಾರೆಂದು ವರದಿಯಾಗಿದೆ. ಪ್ರತ್ಯೇಕತಾವಾದಿಗಳು ಕಾಶ್ಮೀರ ಕಣಿವೆಯಲ್ಲಿ ಮಕ್ಕಳನ್ನು ಬಳಸುತ್ತಿದ್ದಾರೆಂದು ಅವರು ಹೇಳಿದ್ದಾರೆ. ಪೆಲೆಟ್‌ಗನ್ ಮತ್ತು ಅಶ್ರುವಾಯು ವಿರುದ್ಧ ಹೋರಾಡಲು ಅವರು ಇತರರ ಮಕ್ಕಳಲ್ಲಿ ಹೇಳುತ್ತಿದ್ದಾರೆ. ಪ್ರತ್ಯೇಕತಾವಾದಿಗಳಿಗೆ ಪೊಲೀಸರು ಮತ್ತು ಸೇನೆಯ ಭೀತಿ ಇದೆ ಎಂದು ಮೆಹಬೂಬ ಟೀಕಿಸಿದ್ದಾರೆ.

ಕಾಶ್ಮೀರದ ಆರ್ಥಿಕಸ್ಥಿತಿ ಚಿಂತಾಜನಕವಾಗಿದೆ. ಟೂರಿಸಂ ಹಿಂದುಳಿದಿದೆ. ಹೆಚ್ಚುಕಾಲ ಈ ಸ್ಥಿತಿ ಮುಂದುವರಿಯುವುದಿಲ್ಲ. ಕಾಶ್ಮೀರ ತನ್ನ ಪೂರ್ವಸ್ಥಿತಿಗೆ ಮರಳಿದೆ. ದೇವನು ಎಲ್ಲವನ್ನೂ ನೋಡುತ್ತಿದ್ದಾನೆ. ಮಕ್ಕಳ ಮನಸ್ಸಿನಲ್ಲಿ ಉಂಟು ಮಾಡಿರುವ ಗಾಯ ಉಳಿಯಲಿದೆ ಎಂದು ಮೆಹಬೂಬ ಹೇಳಿದ್ದಾರೆ.ಸರಕಾರದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತಿದ್ದರು.

 ಅದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾ ವಾದಿ ನಾಯಕರಿಗೆ ನೀಡಲಾಗಿರುವ ಝೆಡ್ ಕ್ಯಾಟಗರಿ ಭದ್ರತೆ ಮುಂದುವರಿಸುವ ವಿಚಾರವನ್ನು ಕೇಂದ್ರ ಸರಕಾರ ಮರು ಪರಿಶೀಲನೆ ನಡೆಸಲಿದೆ ಎಂದು ವರದಿಯಾಗಿವೆ. ಹುರಿಯತ್ ಕಾನ್ಪರೆನ್ಸ್ ನಾಯಕ ಸೈಯದ್ ಆಲಿಶಾ ಗೀಲಾನಿ ಮುಂತಾದವರಿಗೆ ನೀಡಲಾದ ಭದ್ರತೆಯನ್ನು ಕೇಂದ್ರ ಸರಕಾರ ಮರು ಪರಿಶೀಲನೆ ನಡೆಸಲಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News