ಅಣಕು ಸುನಾಮಿ ರಕ್ಷಣಾ ಕಾರ್ಯಾಚರಣೆ

Update: 2016-09-07 18:28 GMT

ಹೊಸದಿಲ್ಲಿ,ಸೆ.7: ರಕ್ಷಣಾ ಸನ್ನದ್ಧತೆಯನ್ನು ಪರೀಕ್ಷಿಸಲು ಬುಧವಾರದಿಂದ ಎರಡು ದಿನಗಳ ಸುನಾಮಿ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಇಂಡೋನೇಷ್ಯಾದ ಸುಮಾತ್ರಾದಲ್ಲಿ 9.3 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ ಎಂದು ಕಲ್ಪಿಸಿಕೊಂಡು ನಡೆಸಲಾದ ಈ ಕಾರ್ಯಾಚರಣೆಯಲ್ಲಿ 23 ರಾಷ್ಟ್ರಗಳು ಭಾಗವಹಿಸಿವೆ.

ಇಷ್ಟು ತೀವ್ರತೆಯ ಭೂಕಂಪದಿಂದ ಸೃಷ್ಟಿಯಾಗುವ ಸುನಾಮಿಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹ ಹಾಗೂ ಚೆನ್ನೈ ಸೇರಿದಂತೆ ಭಾರತದ ಸಂಪೂರ್ಣ ಪೂರ್ವ ಕರಾವಳಿಯನ್ನು ಅಪ್ಪಳಿಸುತ್ತದೆ.

ಯುನೆಸ್ಕೋ ಸಂಘಟಿಸಿದ್ದ ಇಂದಿನ ಅಣಕು ಕಾರ್ಯಾಚರಣೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗವಹಿಸಿ ಕರಾವಳಿ ಪ್ರದೇಶಗಳಲ್ಲಿಯ 40,000 ಜನರನ್ನು ಮೂರು ಗಂಟೆಗಳಲ್ಲಿ ತೆರವುಗೊಳಿಸಿದರು. ಇಂಡೋನೇಷ್ಯಾದಲ್ಲಿ ಸಂಭವಿಸುವ ಸುನಾಮಿ ಭಾರತದ ಕರಾವಳಿಯನ್ನು ಅಪ್ಪಳಿಸಲು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News