ದರೋಡೆ ಕೋರರಿಂದ ಅಂಗಡಿಯ ನೌಕರನನ್ನು ರಕ್ಷಿಸಿದ ಆರು ವರ್ಷದ ಭಾರತೀಯ ಬಾಲಕಿ : ವೀಡಿಯೊ

Update: 2016-09-08 06:38 GMT

ವೆಲ್ಲಿಂಗ್ಟನ್,ಸೆ.8: ಆಯುಧಧಾರಿಗಳಾದ ದರೋಡೆಕೋರರಿಂದ ಅಂಗಡಿಯ ನೌಕರನನ್ನು ರಕ್ಷಿಸಿದ ಆರು ವಯಸ್ಸಿನ ಭಾರತೀಯ ಬಾಲಕಿಯ ಧೀರ ಕೃತ್ಯವೀಗ ನ್ಯೂಝಿಲೆಂಡಿನಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ತಂದೆಯ ಓಕ್ಲೆಂಡ್‌ನ ಇಲೆಕ್ಟ್ರಾನಿಕ್ ಅಂಗಡಿಯನ್ನು ದೋಚಲು ಬಂದಿದ್ದ ಮುಖವಾಡ ಧರಿಸಿದ ಆರು ಮಂದಿಯಿದ್ದ ದರೋಡೆಕೋರರ ದಾಂಧಲೆಯ ನಡುವೆ ಸಾರಾ ಪಟೇಲ್ ಎಂಬ ಪುಟ್ಟ ಬಾಲಕಿ ತೋರಿಸಿದ ಧೈರ್ಯ ಸಿಸಿಟಿವಿಯ ಮೂಲಕ ಬೆಳಕಿಗೆ ಬಂದಿದೆ.

 ಅಂಗಡಿ ಪುಡಿಗುಟ್ಟಿ ನೌಕರರಿಗೆ ಹೊಡೆಯುತ್ತಿರುವುದರ ಮಧ್ಯೆ ಕೊಡಲಿಯೆತ್ತಿ ಓರ್ವ ನೌಕರನನ್ನು ಕಡಿಯಲು ಯತ್ನಿಸಿದಾಗ ಈ ಬಾಲಕಿ ಹಾಗೆ ಮಾಡಿದಾತನ ಕಾಲಿಗೆ ಹತ್ತಿ ಬಲವಾಗಿ ಹಿಡಿದಿದ್ದಾಳೆ. ಆದ್ದರಿಂದ ದುಷ್ಕರ್ಮಿ ಕೊಡಲಿಯಿಂದ ಹಲ್ಲೆ ಮಾಡುವುದನ್ನು ಬಿಟ್ಟುಬಿಟ್ಟಿದ್ದಾನೆ. ನಂತರ ಅಂಗಡಿಯಲ್ಲಿದ್ದ ತನ್ನ ಅಜ್ಜನಿಗೆ ಹೊರಗೆ ಹೋಗಲು ಬಾಲಕಿ ಸಹಾಯ ಮಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಗಳನ್ನು ನೆನೆದು ತನಗೆ ಹೆಮ್ಮೆಯೆನಿಸುತ್ತಿದೆ ಎಂದು ಬಾಲಕಿಯ ತಂದೆ ಸುಹೈಲ್ ಪಟೇಲ್ ಹೇಳಿದ್ದಾರೆ. ಮಗಳು ಯಾವಾಗಲೂ ಇತರರಿಗೆ ಸಹಾಯ ಮಾಡುವುದನ್ನು ಇಷ್ಟಪಡುತ್ತಿದ್ದಳು. ಆದ್ದರಿಂದ ಅವಳ ಈ ಪ್ರವೃತ್ತಿಯಲ್ಲಿ ಆಶ್ಚರ್ಯಪಡುವಂತಹದ್ದೇನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲಿಂದ ಓಡಿದ ದರೋಡೆ ಕೋರರ ತಂಡವನ್ನು ಪೊಲೀಸರು ಬೆಂಬತ್ತಿದ್ದಾರೆ ಎಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News