×
Ad

ಇಸ್ರೇಲ್ ಪ್ರಧಾನಿಗೆ ಫೆಲೆಸ್ತೀನ್ ಚಿತ್ರಗಳನ್ನು ತೋರಿಸಿದ ಡಚ್ ಸಂಸದ

Update: 2016-09-08 12:32 IST

ಹೇಗ್, ಸೆ.8: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದಿ ಹೇಗ್ ನಲ್ಲಿರುವ ಡಚ್ ಸಂಸತ್ತಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸುವ ಮೊದಲು ಅವರ ಕೈಕುಲುಕಲು ನಿರಾಕರಿಸಿದ ಡಚ್ ಸಂಸದ ಹಾಗೂ ಅಲ್ಲಿನ ಬಹು-ಜನಾಂಗೀಯ ಪಕ್ಷ ಡೆಂಕ್ ಇದರ ಸಹ ಸ್ಥಾಪಕ ಟುನಹನ್ ಕುಝು ಸುದ್ದಿಯಲ್ಲಿದ್ದಾರೆ.
ಇಸ್ರೇಲಿ ಮಿಲಿಟರಿ ಆಡಳಿತದಡಿಯಲ್ಲಿ ಫೆಲೆಸ್ತೀನಿ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಡಚ್ ನಾಗರಿಕರು ವಿರೋಧಿಸುತ್ತಿರುವುದರಿಂದ ತಾನುಇಸ್ರೇಲ್ ಅಧ್ಯಕ್ಷರ ಕೈಕುಲುಕಲು ನಿರಾಕರಿಸಿದೆನೆಂದು ಕುಝು ನಂತರ ಸಮಜಾಯಿಷಿ ನೀಡಿದ್ದಾರೆ.
ಈ ಘಟನೆಯ ಫೋಟೋಗಳು ಹಾಗೂ ವೀಡಿಯೋಗಳಲ್ಲಿ ತಮ್ಮಕೋಟಿನಲ್ಲಿ ಸಣ್ಣ ಫೆಲೆಸ್ತೀನಿ ಧ್ವಜವನ್ನು ಪಿನ್ ಮಾಡಿದ್ದ ಕುಝು ಅವರನ್ನು ಇಸ್ರೇಲ್ ಪ್ರಧಾನಿಯವರಿಗೆ ಪರಿಚಯಿಸಿದಾಗ ಅವರು ತಮ್ಮ ಕೈಗಳನ್ನು ಮುಂದಕ್ಕೆ ಮಾಡಿದರೂ ಕುಝು ತಮ್ಮ ಕೈಗಳನ್ನು ಹಿಂದಕ್ಕೆ ಸರಿಸಿದ್ದರು.
ಈ ಬೆಳವಣಿಗೆಯಿಂದ ಅರೆಕ್ಷಣ ವಿಚಲಿತರಾದ ನೆತನ್ಯಾಹು ‘ಓಹ್ ಓಕೆ’ ಎಂದು ಹೇಳಿದರು.
ಮುಂದೆ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನುಮಾಡಿದ ಕುಝು, ಅಲ್ಲಿಂದ ಮಾಧ್ಯಮಗಳ ಕ್ಯಾಮರಾ ಮೆನ್ಗಳು ಹೊರ ಹೋದ ನಂತರ ತಾವು ಇಸ್ರೇಲಿ ಪ್ರಧಾನಿಯನ್ನು ಭೇಟಿಯಾಗಿ ಅವರಿಗೆ ಗಾಝಾ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಗಳಲ್ಲಿ ಸಮಸ್ಯೆಯನ್ನನುಭವಿಸುತ್ತಿರುವ ಫೆಲೆಸ್ತೀನೀಯರ ಫೋಟೋಗಳನ್ನು ತೋರಿಸಿದ್ದಾಗಿ ಹೇಳಿದರು. ಇವುಗಳಲ್ಲಿ ಒಂದು ಫೋಟೋದಲ್ಲಿ 12 ವರ್ಷದ ಬಾಲಕನನ್ನು ತೂಗುಪಟ್ಟಿಯಲ್ಲಿ ಬಂಧಿಸಿದ್ದನ್ನು ತೋರಿಸಿ ಇದು ಅವರು ಹೇಳುವ ಪ್ರಜಾಪ್ರಭುತ್ವ, ತಂತ್ರಜ್ಞಾನ ಹಾಗೂ ಸುರಕ್ಷೆಯನ್ನು ಬಿಂಬಿಸುತ್ತಿದೆಯೇನು ಎಂದು ಪ್ರಶ್ನಿಸಿದೆನೆಂದೂ ವಿವರಿಸಿದ್ದರು.
ನೆದರ್ ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಇಸ್ರೇಲಿ ಪ್ರಧಾನಿಯನ್ನು ಆತ್ಮೀಯವಾಗಿ ಬರ ಮಾಡಿಕೊಂಡರೂ 1967 ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ಪ್ರದೇಗಳನ್ನು ಯಹೂದ್ಯರಿಗೆ ಮಾತ್ರವೆಂದು ಪರಿಗಣಿಸಲು ಮಾಡುತ್ತಿರುವ ಯತ್ನಗಳ್ನು ನಿಲ್ಲಿಸಬೇಕೆಂದು ಹೇಳಿದರಲ್ಲದೆ, ಇಸ್ರೇಲ್ ಆಕ್ರಮಣವನ್ನು ಬೆಂಬಲಿಸುವವರ ವಿರುದ್ಧ ನಿಷೇಧ ಹೇರಬೇಕೆಂಬ ಬೇಡಕೆ ಮುಂದಿರಿಸಿ ನಡೆಸಲಾಗುತ್ತಿರುವ ಆಂದೋಲನದಲ್ಲಿ ಭಾಗಿಯಾಗುವ ನೆದರ್ \ಲ್ಯಾಂಡ್ಸ್ ನಾಗರಿಕರನ್ನು ತಡೆಯುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಮುಂದೆ ಸ್ವದೇಶಕ್ಕೆ ಮರಳುವ ಹಾದಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಫಾಲೋವರ್ಸ್‌ಗಳಿಗೆ ಸಂದೇಶವೊಂದನ್ನು ನೀಡಿದ ನೆತನ್ಯಾಹು ನೆದರ್ ಲ್ಯಾಂಡ್ಸ್ ನಲ್ಲಿ ನಡೆದ ಘಟನೆ ‘‘ಶಾಂತಿಗಾಗಿ ಪ್ರಯತ್ನ ಪಡುವವರು ಹಾಗೂ ಶಾಂತಿ ಬೇಕಾಗಿಲ್ಲದವರ’ ನಡುವಿನ ವ್ಯತ್ಯಾಸವನ್ನು ಹೊರಗೆಡಹಿದೆ ಎಂದರು.
ಮುಂದಿನ ನೆದರ್ ಲ್ಯಾಂಡ್ಸ್ ಚುನಾವಣೆಯ ನಂತರ ಇಸ್ಲಾಂ ವಿರೋಧಿ ಫ್ರೀಡಂ ಪಾರ್ಟಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಇಸ್ರೇಲಿ ಪ್ರಧಾನಿಯ ಮುಂದಿನ ಭೇಟಿಯ ಸಂದರ್ಭ ಅವರಿಗೆ ಇಲ್ಲಿ ಪರಿಸ್ಥಿತಿ ಅನುಕೂಲಕರವಾಗಲಿದೆಯೆಂದು ತಿಳಿಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News