ಸ್ಕಾಲರ್‌ಶಿಪ್‌ಗೆ ಆಧಾರ್‌ಕಾರ್ಡ್ ಹೇಗೆ ಕೇಳುತ್ತಿದ್ದೀರಿ : ಕೇಂದ್ರ ಸರಕಾರದ ವಿವರಣೆ ಕೇಳಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ಸೆ.8: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪಡೆಯಲು ಆಧಾರ್ ಕಾರ್ಡ್‌ನ್ನು ಹೇಗೆ ಕಡ್ಡಾಯಗೊಳಿಸಿದ್ದೀರಿ ಎಂದು ವಿವರಿಸುವಂತೆ ಕೇಂದ್ರಸರಕಾರಕ್ಕೆ ದಿಲ್ಲಿಹೈಕೋರ್ಟ್ ಹೇಳಿದೆ ಎಂದು ವರದಿಯಾಗಿದೆ. ಪ್ರೀ ಮೆಟ್ರಿಕ್,ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿಸಲ್ಲಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಯಾಕಾಗಿ ಆಧಾರ್‌ಕಾರ್ಡ್‌ಸಲ್ಲಿಸಬೇಕೆಂದು ಸೂಚಿಸುತ್ತಿದ್ದಾರೆ ಎಂದು ಕೋರ್ಟ್ ವಿವರಣೆ ಕೇಳಿದೆ.ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆದು ಈ ತಿಂಗಳು 23ರರೊಳಗೆ ಕೋರ್ಟಿಗೆ ತಿಳಿಸಬೇಕು ಎಂದು ಜಸ್ಟಿಸ್ ಜಿ.ರೋಹಿಣಿ. ಜಸ್ಟಿಸ್ ಸಂಗೀತಾ ದಿಗ್ರ ಸೈಗಾಲ್‌ರ ಪೀಠ ಆದೇಶಿಸಿದೆ.
ಆಧಾರ್‌ಕಾರ್ಡ್ ಮಾತ್ರವೇ ಸ್ಕಾಲರ್ ಶಿಪ್ ಪಡೆಯುವ ಅರ್ಹತೆಯಾಗಿದೆ ಎಂಬುದು ಏಕಪಕ್ಷೀಯ ನಿರ್ಧಾರ ಮತ್ತು ತಾರತಮ್ಯವಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ನಸೀಮುದ್ದೀನ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ದಿಲ್ಲಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಆನ್‌ಲೈನ್ ಮೂಲಕ ಸ್ಕಾಲರ್‌ಶಿಪ್ ಅರ್ಜಿಯನ್ನು ಗುಜರಾಯಿಸುವಾಗ ಆಧಾರ್ ಕಾರ್ಡ್ ಕೂಡಾ ಜೊತೆಗಿರಬೇಕೆಂದು ಸೂಚಿಸುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅಡ್ವಕೇಟ್ ಪ್ರಶಾಂತ್‌ಭೂಷಣ್,ನೇಹಾ ರಾತಿಯವರ ಮೂಲಕ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ ಎಂದು ವರದಿ ತಿಳಿಸಿದೆ.