×
Ad

ಫೇಸ್‌ಬುಕ್‌ನಲ್ಲಿ ಸಂಚಲನ ಸೃಷ್ಟಿಸಿದ ಅವಳಿ ಮಕ್ಕಳ ಅಪ್ಪುಗೆಯ ಚಿತ್ರ, ಆದರೆ....ಒಂದು ಮಗು ಕಾಯಿಲೆಗೆ ಬಲಿ

Update: 2016-09-08 13:17 IST

ಫ್ಲೋರಿಡಾ(ಅಮೆರಿಕ), ಸೆ.8: ಆರು ದಿನಗಳ ಹಿಂದೆ ಅವಳಿ ಮಕ್ಕಳು ಅಪ್ಪಿಕೊಂಡು ಮಲಗಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಇದೀಗ ಒಂದು ಮಗು ಅಪರೂಪದ ಕಾಯಿಲೆಗೆ ಬಲಿಯಾಗಿದ್ದು, ಸಾವಿರಾರು ಜನರು ಹೆತ್ತವರ ದುಃಖವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅವಳಿ ಗಂಡುಮಕ್ಕಳು ಜನಿಸಿದ 11 ದಿನಗಳ ಬಳಿಕ ಆ ಮಕ್ಕಳ ಹೆತ್ತವರು ಎರಡೂ ಮಕ್ಕಳು ಅಪ್ಪಿಕೊಂಡು ಮಲಗಿದ್ದ ಅಪರೂಪದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು. 1,19,000 ಜನರು ಈ ಫೋಟೊವನ್ನು ಇಷ್ಟಪಟ್ಟಿದ್ದರು.

ಅವಳಿ ಮಗುವಿನ ಪೈಕಿ ಒಂದು ಮಗು ಹುಟ್ಟಿನಿಂದಲೇ ಡೈಫ್ರಅಗ್ಸಾಟಿಕ್ ಹರ್ನಿಯಾ(ಸಿಡಿಎಚ್) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಹಾಕ್ ಹೆಸರಿನ ಆ ಮಗು ನಿನ್ನೆ ಸಾವನ್ನಪ್ಪಿದೆ, ಮಾಸನ್ ಹೆಸರಿನ ಮತ್ತೊಂದು ಮಗು ಆರೋಗ್ಯವಾಗಿದೆ ಎಂದು ಅವಳಿ ಮಕ್ಕಳ ಕುಟುಂಬ ಸದಸ್ಯರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News