×
Ad

ಪತ್ನಿಯಿಂದ ಪಾರಾಗಲು ಭಯಂಕರ ಉಪಾಯ ಹೂಡಿ, ಯಶಸ್ವಿಯಾದ ವೃದ್ಧ

Update: 2016-09-08 20:58 IST

ಕಾನ್ಸಾಸ್ , ಸೆ. 8 : ಇಲ್ಲಿನ ಬ್ಯಾಂಕ್ ಒಂದಕ್ಕೆ ಬಂದ 70 ವರ್ಷದ ವೃದ್ಧ ಲಾರೆನ್ಸ್ ರಿಪ್ಲ್ ಅಲ್ಲಿನ ನಗದು ವಿಭಾಗಕ್ಕೆ ಹೋಗಿ ನನ್ನ ಬಳಿ ಗನ್ ಇದೆ, ಹಣ ಕೊಡು ಎಂದು ಹೇಳಿದ ಕೊಡಲೇ ಅಲ್ಲಿದ್ದ ಸಿಬ್ಬಂದಿ ಆತನಿಗೆ $3,000 ( ಸುಮಾರು 2 ಲಕ್ಷ ರೂಪಾಯಿ) ನೀಡುತ್ತಾರೆ. ಆದರೆ ಅದನ್ನು ತೆಗೆದುಕೊಂಡು ಪರಾರಿಯಾಗುವ ಬದಲು ಆ ವೃದ್ಧ ಬ್ಯಾಂಕಿನ ಸ್ವಾಗತ ವಿಭಾಗಕ್ಕೆ ಹೋಗಿ ಕುಳಿತು, ಸುರಕ್ಷತಾ ಸಿಬ್ಬಂದಿಯನ್ನು ಕರೆದು " ನಾನೇ ನಿಮ್ಮ ಬ್ಯಾಂಕ್ ದರೋಡೆ ಮಾಡಿದ್ದು " ಎಂದು ಮಾಹಿತಿ ನೀಡುತ್ತಾನೆ. ವೃದ್ಧನಿಂದ ಹಣ ಪಡೆದ ಸಿಬ್ಬಂದಿ ಪೊಲೀಸರನ್ನು ಕರೆಯುತ್ತಾನೆ. ವೃದ್ಧ ಆರಾಮವಾಗಿ ಎದ್ದು ಪೋಲೀಸರ ಜೊತೆ ಹೋಗುತ್ತಾನೆ ! 

ಏಕೆಂದರೆ , ಆತನಿಗೆ ಅದೇ ಬೇಕಾಗಿತ್ತು. ಆತನ ಪತ್ನಿಯ ಜೊತೆ ಜಗಳ ವೀಪರೀತಕ್ಕೆ ಹೋಗಿ ಮನೆಯಲ್ಲಿ ಇರುವುದೇ ಅಸಾಧ್ಯ ಎಂದು ಅನಿಸಿಬಿಟ್ಟಿತ್ತು. ಹಾಗಾಗಿ ಅವನಿಗೆ ಹೊಳೆದ ಉಪಾಯ ಬ್ಯಾಂಕ್ ದರೋಡೆಯದ್ದು ! 

"ನಿನ್ನ ಜೊತೆ ಬದುಕುವುದಕ್ಕಿಂತ ಜೈಲಿನಲ್ಲಿ ಇರುತ್ತೇನೆ " ಎಂದು ಪತ್ನಿಗೆ ಹೇಳಿಯೇ ಬಂದಿದ್ದ ಈ ಪತಿರಾಯ!.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News