ವೌಂಟನ್‌ವ್ಯೆ ಪಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಚಿಕ್ಕಮಗಳೂರು, ಸೆ.8: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ 2016, ಬಾಲಕರ ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ವೌಂಟನ್ ವ್ಯೆ ಪದವಿ ಪೂರ್ವ ಕಾಲೇಜು ತನ್ನದಾಗಿಸಿಕೊಂಡಿದೆ.
ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಪಿಯು ಶಿಕ್ಷಣ ಇಲಾಖೆ ಮತ್ತು ಎಂ.ಇ.ಎಸ್.ಎಸ್.ಎಂ ಪಿಯು ಕಾಲೇಜಿನ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಿತು. ಜಿಲ್ಲೆಯ 100ಕ್ಕೂ ಹೆಚ್ಚು ಪಿಯು ಕಾಲೇಜುಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೌಂಟನ್‌ವ್ಯೆ ಪದವಿ ಪೂರ್ವ ಕಾಲೇಜು ತಂಡ 1,500ಮೀ. ಓಟ, 5,000ಮೀ. ಓಟ, 400ಮೀ. ಓಟ, 800ಮೀ. ಓಟ, 100ಮೀ. ಓಟ, 200ಮೀ. ಓಟ, ಗುಡ್ಡಗಾಡು ಓಟ, 4x400ಮೀ. ರಿಲೆ, ಚಕ್ರ ಎಸೆತ, ಈಜು ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಸೇರಿದಂತೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಧಿಕ ಬಹುಮಾನಗಳಿಸುವ ಮೂಲಕ 46 ಅಂಕಗಳೊಂದಿಗೆ ಬಾಲಕರ ವಿಭಾಗದ ಸಮಗ್ರ ತಂಡ ಪ್ರಶಸ್ತಿಗಳಿಸಿದೆ ಎಂದು ದೈಹಿಕ ಶಿಕ್ಷಣ ಉಪನ್ಯಾಸಕ ಮುದಬ್ಬಿರ್ ಶಾಬಾಜ್ ತಿಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ವೌಂಟನ್‌ವ್ಯೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಬೀಬಾ ಎನ್ ಪಾಷ ಮತ್ತು ಪ್ರಾಂಶುಪಾಲೆ ತಸ್ನೀಮ್ ಫಾತಿಮಾ ಅಭಿನಂದಿಸಿದ್ದಾರೆ. ಸುಮಾರು ಕ್ರೀಡಾಪಟುಗಳ ತಂಡ ಕ್ರೀಡಾಕೂಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದು ವಿಜೇತ ವಿದ್ಯಾರ್ಥಿಗಳು ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.