×
Ad

ಆಕಾಶದಲ್ಲಿ ವಿಮಾನಗಳ ಢಿಕ್ಕಿ; 3 ಸಾವು

Update: 2016-09-08 22:38 IST

ಕ್ಯಾರಲ್ಟನ್ (ಜಾರ್ಜಿಯ), ಸೆ. 8: ಪಶ್ಚಿಮ ಜಾರ್ಜಿಯದ ಗ್ರಾಮೀಣ ವಿಮಾನ ನಿಲ್ದಾಣವೊಂದರಲ್ಲಿ ಎರಡು ಸಣ್ಣ ವಿಮಾನಗಳು ಆಕಾಶದಲ್ಲಿ ಬುಧವಾರ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ವಿಮಾನ ಹಾರಾಟ ಶಿಕ್ಷಕಿ, ಅವರ ವಿದ್ಯಾರ್ಥಿ ಹಾಗೂ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ವೆಸ್ಟ್ ಜಾರ್ಜಿಯ ರೀಜನಲ್ ವಿಮಾನ ನಿಲ್ದಾಣದ ಏಕೈಕ ರನ್‌ವೇಯ ತುದಿಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಏಕ ಇಂಜಿನ್ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದವು ಎಂದು ಕ್ಯಾರಲ್ ಕೌಂಟಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಒಂದು ವಿಮಾನದಲ್ಲಿ 24 ವರ್ಷದ ಶಿಕ್ಷಕಿ ಹಾಗೂ ಆಕೆಯ ಶಿಷ್ಯ ಇದ್ದರೆ, ಇನ್ನೊಂದರಲ್ಲಿ 79 ವರ್ಷದ ವ್ಯಕ್ತಿಯೊಬ್ಬರು ಏಕಾಂಗಿಯಾಗಿದ್ದರು.

.Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News