×
Ad

ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Update: 2016-09-08 23:15 IST

ಹೊಸದಿಲ್ಲಿ,ಸೆ.8:ಮಹತ್ವದ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್‌ಟಿ)ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದರು. ತನ್ಮೂಲಕ ನೂತನ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಮುಂದಿನ ವರ್ಷದ ಎ.1ರಿಂದ ಜಾರಿಗೆ ತರಲು ಮೋದಿ ಸರಕಾರಕ್ಕೆ ಮಾರ್ಗ ಸುಗಮಗೊಂಡಿದೆ.16 ರಾಜ್ಯಗಳು ಮಸೂದೆಯನ್ನು ಸ್ಥಿರೀಕರಿಸಿದ ಬಳಿಕ ಸರಕಾರವು ಅದನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿತ್ತು. ಕಳೆದ ಆಗಸ್ಟ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಮಸೂದೆಯು ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News