ಫೆಲೆಸ್ತೀನ್ ವಿರುದ್ಧ ಹೇಳಿಕೆ: ಇಸ್ರೇಲ್ ಪ್ರಧಾನಿಯನ್ನು ಟೀಕಿಸಿದ ಅಮೆರಿಕ
Update: 2016-09-10 15:56 IST
ಜೆರುಸಲೇಂ,ಸೆಪ್ಟಂಬರ್ 10: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಫೆಲೆಸ್ತೀನ್ ವಿರೋಧಿ ಹೇಳಿಕೆಯನ್ನು ಅಮೆರಿಕ ಟೀಕಿಸಿದೆ. ಫೆಲೆಸೀನಿ ಜನತೆ ಜನಾಂಗೀಯ ವಿನಾಶವನ್ನು ಬಯಸುತ್ತಿದ್ದಾರೆ ಎಂದು ನೆತ್ಯಾನ್ಯಾಹು ಹೇಳಿಕೆ ನೀಡಿದ್ದರು. ಇಸ್ರೇಲ್‌ನ ಪ್ರೆಸ್ ಆಫೀಸ್ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಈ ವಿವಾದಾತ್ಮಕ ಹೇಳಿಕೆ ಇದೆ. ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣದ ಕುರಿತು ಮಾತಾಡುತ್ತಾ ನೆತನ್ಯಾಹು ಹಾಗೆ ಹೇಳಿದ್ದರು.
ಇಸ್ರೇಲ್‌ನ ಹೇಳಿಕೆಯನ್ನು ಶಕ್ತವಾಗಿ ವಿರೋಧಿಸುವುದಾಗಿ ಅಮೆರಿಕ ಹೇಳಿದೆ. ಇಂತಹ ಹೇಳಿಕೆಗಳು ನ್ಯಾಯೋಚಿತವಲ್ಲ ಮತ್ತು ಉಪಕೃತವೂ ಅಲ್ಲ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರೆ ಎಲಿಝಬೆತ್ ಟ್ರೂಡ್‌ಯು ಹೇಳಿದ್ದಾರೆ.