×
Ad

ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು: ಟಾಟಾ

Update: 2016-09-10 23:52 IST

ಹೊಸದಿಲ್ಲಿ, ಸೆ.10: ತನ್ನ ಟ್ವಿಟರ್ ಖಾತೆಯನ್ನು ನಿನ್ನೆ ಹ್ಯಾಕ್ ಮಾಡಿ, ‘ಕೆಟ್ಟ ಉದ್ದೇಶದ’ ವಿಷಪೂರಿತ ಟ್ವೀಟ್‌ಗಳನ್ನು ಕಳುಹಿಸಲಾಗಿದೆಯೆಂದು ಖ್ಯಾತ ಉದ್ಯಮಿ ರತನ್ ಟಾಟಾ ಇಂದು ಆರೋಪಿಸಿದ್ದಾರೆ.

ನಿನ್ನೆ ತನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವುದನ್ನು ತಿಳಿದು ಆಘಾತವಾಯಿತು. ತನ್ನ ಹೆಸರಿನಲ್ಲಿ ಕೆಟ್ಟ, ದ್ವೇಷ ಪೂರಿತ ಸಂದೇಶಗಳನ್ನು ಕಳುಹಿಸಲಾಗಿದೆ. ಈಗ ಆ ಸಂದೇಶಗಳನ್ನು ಅಳಿಸಿದ್ದು, ತನ್ನ ಟ್ವಿಟರ್ ಖಾತೆಯನ್ನು ಮರುನಿರ್ಮಾಣ ಮಾಡಲಾಗಿದೆ. ಈ ದುರುದ್ದೇಶಿತ ಕ್ರಮದಿಂದ ಯಾರಿಗಾದರೂ ತೊಂದರೆಯಾಗಿದ್ದರೆ ವಿಷಾದಿಸುತ್ತೇನೆಂದು ಅವರು ಟ್ವೀಟಿಸಿದ್ದಾರೆ.
ಟ್ವಿಟರ್‌ನಲ್ಲಿ ಸಕ್ರಿಯರಾಗಿಲ್ಲವೆಂದು ಭಾವಿಸಿರುವ ಟಾಟಾ ಸನ್ಸ್‌ನ ನಿವೃತ್ತ ಅಧ್ಯಕ್ಷರ ಟ್ವೀಟ್‌ನಿಂದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಟಾಟಾ ಈ ಹಿಂದೆ 2015ರ ಸೆ.1, ಫೆ.21 ಹಾಗೂ ಡಿ.28ರಂದು ಟ್ವೀಟ್ ಮಾಡಿದ್ದರು. ಅವರು, 2011ರ ಎಪ್ರಿಲ್‌ನಲ್ಲಿ ಟ್ವಿಟರ್ ಖಾತೆ ತೆರೆದ ಬಳಿಕ 61.3ಲಕ್ಷ ಹಿಂಬಾಲಕರನ್ನು ಹೊಂದಿದ್ದು, 119 ಟ್ವೀಟ್‌ಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News